ನಾಗರಿಕರ ಮೇಲೆ ದಾಳಿಗೆ ಯೋಜಿಸಿದ್ದ ಇಬ್ಬರು ಉಗ್ರರ ಬಂಧನ

Advertisements

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು (Terrorist) ಬುಧವಾರ ಬಂಧಿಸಿದ್ದಾರೆ.

Advertisements

ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಭದ್ರಾತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತಿಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು (Arrest) ಇಮ್ತಿಯಾಜ್ ಅಹ್ಮದ್ ಗನೈ ಮತ್ತು ವಸೀಮ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಯೊಂದಿಗೆ ಸಂಬಂಧ ಹೊಂದಿರುವ ವಿಷಯ ಬೆಳಕಿಗೆ ಬಂದಿದೆ.

Advertisements

ಈ ಇಬ್ಬರು ಉಗ್ರರು ಸೋಪೋರ್ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದರು ಎಂಬ ವಿಷಯ ಬಯಲಾಗಿದೆ. ಬಂಧಿತ ಇಬ್ಬರು ಉಗ್ರರಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Live Tv

Advertisements
Exit mobile version