ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದಲ್ಲಿ ದೋಷಿಯಾಗಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸಿನ್ ಮಲಿಕ್‌ಗೆ ರಾಷ್ಟ್ರೀಯ ತನಿಖಾದಳದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,00,000 ರೂ. ದಂಡ ವಿಧಿಸಿದೆ.
ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ವಿವಿಧ ಪ್ರಕರಣಗಳು ಯಾಸಿನ್ ಮಲಿಕ್ ಮೇಲೆ ದಾಖಲಾಗಿತ್ತು. ತನ್ನ ಮೇಲೆ ದಾಖಲಾದ ಆರೋಪಗಳ ಸಂಬಂಧ ಮೇ 10ರಂದು ಕೋರ್ಟ್‌ನಲ್ಲಿ ಮಲಿಕ್ ತಪ್ಪೊಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಲಿಕ್‌ಗೆ ಮರಣದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕೋರ್ಟ್‌ಗೆ ಮನವಿ ಮಾಡಿತ್ತು. ಇದನ್ನೂ ಓದಿ: ಯಾಸಿನ್ ಮಲಿಕ್ ಮರಣದಂಡನೆ ನೀಡಿ – ನ್ಯಾಯಾಯಲಕ್ಕೆ ಎನ್‌ಐಎ ಮನವಿ
Advertisement
Advertisement
ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ವಿವಿಧ ಪ್ರಕರಣಗಳ ಮೇಲೆ 2017ರಲ್ಲಿ ಮಲಿಕ್ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿತ್ತು. ಇದನ್ನೂ ಓದಿ: ಹೆಲ್ಮೆಟ್ ಧರಿಸದಿದ್ರೆ 3 ತಿಂಗಳು ಲೈಸನ್ಸ್ ರದ್ದು
Advertisement
ಜಮ್ಮು-ಕಾಶ್ಮೀರದಲ್ಲಿ ಬಿಗಿ ಭದ್ರತೆ:
ಯಾಸಿನ್ ಮಲಿಕ್ ಬಗ್ಗೆ ನ್ಯಾಯಾಲಯ ತೀರ್ಪು ಹೊರಬೀಳುವ ಹಿನ್ನೆಲೆ ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆಯನ್ನು ಮಾಡಲಾಗಿದೆ. ನಗರದಲ್ಲಿ ಕಲ್ಲು ತೂರಾಟದಂತಹ ಕೃತ್ಯಗಳನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶ್ರೀನಗರಲ್ಲಿ ಇಂಟರ್‌ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.