ಡುಂಡ್ರುಮ್: ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುವುದು ಹೆತ್ತವರ ಆದ್ಯ ಕರ್ತವ್ಯ. ಯಾಕಂದ್ರೆ ಸ್ವಲ್ಪ ಯಾಮಾರಿದ್ರೂ ಮಕ್ಕಳ ಪ್ರಾಣಕ್ಕೆ ಕುತ್ತು ಬರಬಹುದು ಅನ್ನೋದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ.
ಹೌದು. ಹೆತ್ತವರ ಬೇಜಾಬ್ದಾರಿತನದಿಂದ 7 ತಿಂಗಳ ಪುಟ್ಟ ಹೆಣ್ಣುಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ವಿದೇಶದಲ್ಲಿ ನಡೆದಿದೆ.
Advertisement
Advertisement
ನಡೆದಿದ್ದೇನು?: ಕೌಂಟಿಟಿಪ್ಪರಿಯಲ್ಲಿರುವ ಡುಂಡ್ರುಮ್‍ನ ಐರಿಶ್ ಗ್ರಾಮದ ದಂಪತಿ ಪಾಲ್ ಹಾಗೂ ಲೂಯಿಸ್ ಫೋಗಾರ್ಟಿ ನಿರ್ಲಕ್ಷ್ಯತನದಿಂದ ಇಂದು ತಮ್ಮ 7 ತಿಂಗಳ ಮಗುವನ್ನು ಕಳೆದುಕೊಂಡಿದ್ದಾರೆ.
Advertisement
ಕೆಲಸದ ನಿಮಿತ್ತ ಮಗುವಿನೊಂದಿಗೆ ಹೊರಗೆ ಹೋಗಿದ್ದ ದಂಪತಿ ಮತ್ತೆ ಮನೆಗೆ ವಾಪಾಸ್ಸಾಗಿದ್ದಾರೆ. ಆದ್ರೆ ಮಗು ಕಾರಿನ ಹಿಂದಿನ ಸೀಟಿನಲ್ಲಿ ನಿದ್ರಿಸಿರುವುದರಿಂದ ಪೋಷಕರು ಮರೆತು ಮಗುವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದಾರೆ. ಕಡು ಬಿಸಿಲಿನಲ್ಲಿ ಬರೋಬ್ಬರಿ 4 ಗಂಟೆಗಳ ಕಾಲ ಕಾರೊಳಗಿದ್ದ ಮಗು ಬಿಸಿಲಿನ ತಾಪ ಹಾಗೂ ಕಾರಿನ ಗ್ಲಾಸ್ ಕ್ಲೋಸ್ ಆಗಿದ್ದುದರಿಂದ ಉಸಿರಾಡಲು ಕಷ್ಟವಾಗಿ ಮೃತಪಟ್ಟಿದೆ.
Advertisement
ಇತ್ತ ಸ್ವಲ್ಪ ಸಮಯದ ಬಳಿಕ ತಂದೆಗೆ ಮಗುವಿನ ನೆನಪಾಗಿದ್ದು, ಕೂಡಲೇ ಕಾರಿನ ಹತ್ತಿರ ಬಂದು ಮಗುವನ್ನು ಗಮನಿಸಿದ್ದಾರೆ. ಈ ವೇಳೆ ಮಗುವಿನ ಚಲವಲನದಲ್ಲಿ ಯಾವುದೇ ವ್ಯತ್ಯಾಸ ಕಾಣದಿರುವುದರಿಂದ ಆತಂಕಗೊಂಡ ಹೆತ್ತವರು ಕೂಡಲೇ ಸ್ಥಳೀಯರನ್ನು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಅಂತೆಯೇ ಸ್ಥಳೀಯರು ಅಂಬುಲೆನ್ಸ್‍ಗೆ ಕರೆ ಮಾಡಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅದಾಗಲೇ ಮಗು ಮೃತಪಟ್ಟಿದೆ ಅಂತಾ ವೈದ್ಯರು ಘೋಷಿಸಿದ್ದರು.
ದಂಪತಿಗೆ ಏಕೈಕ ಪುತ್ರಿಯಾಗಿದ್ದು, ಈಕೆ ಮೃತಪಟ್ಟಿರುವುದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅವರದ್ದು ಉತ್ತಮ ಕುಟುಂಬವಾಗಿದ್ದು, ಅವರ ಬಗ್ಗೆ ಸ್ಥಳೀಯರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರ ಕುಟುಂಬದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಅಂದ್ರೆ ನಂಬಲು ಸಾಧ್ಯವಾಗುತ್ತಿಲ್ಲ ಅಂತಾ ಸ್ಥಳೀಯರೊಬ್ಬರು ಪತ್ರಿಕೆಯೊಂದಿಗೆ ತಿಳಿಸಿದ್ದಾರೆ. ಅಲ್ಲದೇ ಈ ದುರಂತದಿಂದ ನನಗೆ ತುಂಬಾ ನೋವಾಗಿದೆ. ಇದೊಂದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದೆ ಅಂತಾ ಅಂಬುಲೆನ್ಸ್ ವಕ್ತಾರರು ಕೂಡ ಕಂಬನಿ ಮಿಡಿದಿದ್ದಾರೆ.