ಲಂಡನ್: ಒಡಿಶಾ ರೈಲು ಅಪಘಾತದಲ್ಲಿ (Odisha Train Tragedy) ಮೃತಪಟ್ಟ ವ್ಯಕ್ತಿಗಳಿಗೆ ಬ್ರಿಟನ್ ಪ್ರಧಾನಿ ರಿಶಿ ಸುನಕ್ (Rishi Sunak) ಸಂತಾಪ ಸೂಚಿಸಿದ್ದಾರೆ.
ಈ ದುರ್ಘಟನೆಯಿಂದ ಸಂಕಟ ಅನುಭವಿಸುತ್ತಿರುವ ಕುಟುಂಬಸ್ಥರೊಂದಿಗೆ ನನ್ನ ಹಾರೈಕೆ ಹಾಗೂ ಪ್ರಾರ್ಥನೆ ಜೊತೆಗಿದೆ. ದುರಂತದಿಂದಾಗಿ ಮನಸ್ಸಿಗೆ ಘಾಸಿಯಾಗಿದೆ. ಮೃತಪಟ್ಟವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ ಎಂದು ಸುನಕ್ ಟ್ವೀಟ್ ಮಾಡಿದ್ದಾರೆ.
Advertisement
Advertisement
ಅಲ್ಲದೆ ಘಟನೆಯಲ್ಲಿ ಬದುಕುಳಿದವರ ರಕ್ಷಣೆಗಾಗಿ ದಣಿವರಿಯದೆ ಶ್ರಮಿಸುತ್ತಿರುವವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ (arendra Modi) ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಗಾಯಾಳುಗಳಿಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಯುವಜನತೆ
Advertisement
Advertisement
ಶುಕ್ರವಾರ ರಾತ್ರಿ ಚೆನ್ನೈ-ಕೊರಮಂಡಲ್ ಎಕ್ಸ್‍ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಪರಸ್ಪರ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತ್ತು. ಎಕ್ಸ್‍ಪ್ರೆಸ್ ರೈಲು ಡಿಕ್ಕಿಯಾದ (Train Accident) ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿದ್ದವು. ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ