ಬಿಗ್ ಬಾಸ್ (Bigg Boss Season 9) ಮನೆಯ ಅಷ್ಟೂ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ಸವಿ ನಿದ್ರೆಯಲ್ಲಿ ಮೈ ಮರೆತು ಮಲಗಿದ್ದವರು, ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ ಭಯಾನಕ ಸೌಂಡ್‍ಗೆ ದಿಕ್ಕೆಟ್ಟು ಗಾರ್ಡನ್ ಏರಿಯಾದತ್ತ ಓಡಿದ ಪ್ರಸಂಗ ನಡೆದಿದೆ. ಶಬ್ದ ಕೇಳುತ್ತಿದ್ದಂತೆಯೇ ಜೀವವೇ ಬಾಯಿಗೆ ಬಂದಂತಾಗಿ, ಪ್ರಾಣ ರಕ್ಷಣೆಗಾಗಿ ಅತ್ತಿತ್ತ ಓಡಿದ ಘಟನೆ ನಡೆದಿದೆ. ಭಯಾನಕ ಹಾಗೂ ವಿಚಿತ್ರ ಸೌಂಡ್ ಜೊತೆಗೆ ಮನೆಯ ಲೈಟ್ ಕೂಡ ವಿಚಿತ್ರವಾಗಿ ಕುಣಿದು ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಒಬ್ಬರಿಗೊಬ್ಬರು ಕಾಲೆಳೆದುಕೊಂಡು, ಕಚಗುಳಿ ಇಡ್ತಾ, ಆಗೊಮ್ಮೆ ಈಗೊಮ್ಮೆ ರೊಮ್ಯಾಂಟಿಕ್ ಆಗಿ ಮಾತಾಡ್ತಾ, ಸವಿ ನಿದ್ದೆಗೆ ಜಾರೋದು ಬಿಗ್ ಬಾಸ್ ಮನೆಯಲ್ಲಿದ್ದವರ ದಿನಚರಿ. ರಾತ್ರಿ ಹಾಯಾಗಿ ಮಲಗಿ, ಬೆಳಗ್ಗೆ ‘ಎದ್ದೇಳು ಮಂಜುನಾಥ’ ಹಾಡಿಗೆ ಕುಣಿಯುತ್ತಾ ಹೊಸ ದಿನ ಶುರು ಮಾಡೋ ಹೊತ್ತಲ್ಲಿ ಈ ಭಾರೀ ಕೆಲ ಹೊತ್ತು ಆತಂಕ ಸೃಷ್ಟಿ ಮಾಡಿತ್ತು. ಕೆಲವರು ನಿಂತಲ್ಲಿಯೇ ಬೆಚ್ಚಿದರೆ, ಕೆಲವರು ಬಿಗ್ ಬಾಸ್ ಮನೆಯಿಂದ ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರು ಗಾರ್ಡನ್ ಏರಿಯಾಗೆ ಬಂದು ಸುಧಾರಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ
ಅಷ್ಟಕ್ಕೂ ಆ ಶಬ್ದ ಬಂದಿದ್ದು ಎಲ್ಲಿಂದ ಎನ್ನುವುದೇ ಇಂಟ್ರಸ್ಟಿಂಗ್ ವಿಷ್ಯ. ಸಾಮಾನ್ಯವಾಗಿ ಬೆಳಗ್ಗೆ ಸ್ಪರ್ಧಿಗಳನ್ನು ಎಬ್ಬಿಸೋಕೆ ‘ಎದ್ದೇಳು ಮಂಜುನಾಥ’ ಹಾಡು ಹಾಕಲಾಗತ್ತೆ. ಅದರ ಬಲು ಭಾರೀ ಶಬ್ದ ಮಾಡಿ ಎಬ್ಬಿಸುವ ಪ್ರಯತ್ನ ನೆನ್ನೆ ನಡೆದಿದೆ. ಶಬ್ದ ಕೇಳಿ ಭಯಗೊಂಡು ಗಾರ್ಡನ್ ಏರಿಯಾಗೆ ಬಂದವರಿಗೆ ಅಲ್ಲೊಂದು ಸರ್ ಪ್ರೈಸ್ ಕಾದಿತ್ತು. ಗಾರ್ಡನ್ ಏರಿಯಾದಲ್ಲಿ ಮೆದುಳಿನ ಮಾದರಿಯನ್ನು ಇಡಲಾಗಿತ್ತು. ಈ ಮೆದುಳಿಗೆ ಲೈಟ್ ಕೂಡ ಹಾಕಿ ಡೆಕಾರೇಟ್ ಮಾಡಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದ, ಭಯಾನಕ ಶಬ್ದಕ್ಕೂ ಈ ಮೆದುಳಿನಾಕೃತಿಗೂ ಏನಾದರೂ ಸಂಬಂಧ ಇದೆಯಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೌದು, ಈ ವಾರದಲ್ಲಿ ಮೆದುಳಿಗೆ ಸಂಬಂಧಿಸಿದ ಟಾಸ್ಟ್ ಇರಲಿದೆ ಎಂದು ಹೇಳಲಾಗುತ್ತಿದೆ. ಶಕ್ತಿ ಮತ್ತು ಯುಕ್ತಿಗಳ ಸಮ್ಮಿಲನವೇ ಈ ವಾರದ ಟಾಸ್ಕ್ ಎಂದು ಹೇಳಲಾಗುತ್ತಿದೆ. ಅದನ್ನು ತಿಳಿಸುವುದಕ್ಕಾಗಿಯೇ ಬಿಗ್ ಬಾಸ್ ಈ ರೀತಿ ಆಟವಾಡಿದ್ದಾರೆ ಎನ್ನುವುದು ಮನೆ ಒಳಗಿದ್ದವರು ಲೆಕ್ಕಾಚಾರ. ಆದರೆ, ಬಿಗ್ ಬಾಸ್ ಲೆಕ್ಕಾಚಾರ ಅದೇನಿದೆಯೋ, ಅವನೇ ಬಲ್ಲ.