ಉಡುಪಿ: ಪರ್ಷಿಯನ್ (Persian) ಭಾಷೆಯಲ್ಲಿ ಹಿಂದೂ ಪದಕ್ಕೆ ಅಶ್ಲೀಲ ಅರ್ಥ ಇದೆ ಎಂದ ಸತೀಶ್ ಜಾರಕಿಹಳಿ (Satish Jarkiholi) ವಿರುದ್ಧ ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ವಿರೋಧ ವ್ಯಕ್ತವಾಗಿದೆ. ಕಡಿಯಾಳಿಯಲ್ಲಿ ಜಮಾಯಿಸಿದ ಬಿಜೆಪಿ (BJP) ನಾಯಕರು ಮತ್ತು ಕಾರ್ಯಕರ್ತರು ಈ ಹೇಳಿಕೆಯ ವಿರುದ್ಧ ಅಸಮಾಧಾನ ಹೊರಹಾಕಿ, ಗಡಿಪಾರಿಗೆ ಆಗ್ರಹಿಸಿದರು.
Advertisement
ಹಿಂದೂ (Hindu) ಶಬ್ಧದ ಬಗ್ಗೆ ತಕರಾರು ಇರುವ ಸತೀಶ್ ಜಾರಕಿಹೊಳಿಯನ್ನು ಬಂಧಿಸಿ, ಹಿಂದೂಸ್ಥಾನದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ (Congress) ಹಿಂದೂಗಳ ಅವಹೇಳನ ಮಾಡುತ್ತಾ ಬಂದಿದೆ. ರಾಮ ಮಂದಿರ, ರಾಮ ಸೇತು, ಕಾಶ್ಮೀರ ವಿಚಾರದಲ್ಲೂ ಇದನ್ನೇ ಮಾಡಿದ್ದರು. ಜಾರಕಿಹೊಳಿ ತನ್ನ ಹೇಳಿಕೆಗೆ ಬದ್ಧ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್‍ನ ಕುಟಿಲ ಮಾನಸಿಕತೆಗೆ ಸಾಕ್ಷಿ. ವಿಕಿಪೀಡಿಯಾದಲ್ಲಿ ನೆಹರು ಇಂದಿರಾಗಾಂಧಿ ಬಗೆಗೂ ಸಾಕಷ್ಟು ವಿಚಾರಗಳಿವೆ. ಎಲ್ಲಾ ವಿಚಾರವನ್ನು ಹೇಳಿದರೆ ಕಾಂಗ್ರೆಸ್‍ಗೆ ಜನ ಚಪ್ಪಲಿಯಲ್ಲಿ ಹೊಡಿತಾರೆ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಗರಂ ಆದರು. ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದು ಸಿದ್ದರಾಮಯ್ಯ ವಿರುದ್ಧ ಅಶ್ಲೀಲ ಮಾತು
Advertisement
Advertisement
ನಾವು ಕಾಂಗ್ರೆಸ್ ಮನಸ್ಥಿತಿಗೆ ಇಳಿಯಲ್ಲ. ರಾಜಕೀಯ ಪಕ್ಷಕ್ಕೆ ಗೌರವ ಕೊಡುತ್ತೇವೆ. ಅಶ್ಲೀಲ ಸತೀಶ್ ಜಾರಕಿಹೊಳಿಯನ್ನು ಗಡಿಪಾರು ಮಾಡಿ. ಇಲ್ಲವೇ, ರಾಜ್ಯ ವ್ಯಾಪಿ ಉಗ್ರ ಪ್ರತಿಭಟನೆಗೆ ಎದುರಿಸಲು ಸಿದ್ಧರಾಗಿ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಇದನ್ನೂ ಓದಿ: `ಹಿಂದೂ’ ಅಶ್ಲೀಲ ಪದ ಅನ್ನೋದು ಯಾವ ಪುಸ್ತಕದಲ್ಲಿದೆ ನನಗಂತೂ ಗೊತ್ತಿಲ್ಲ: ಡಿಕೆಶಿ
Advertisement
ಶಾಸಕ ರಘುಪತಿ ಭಟ್ ಮಾತನಾಡಿ, ಸತೀಶ್ ಜಾರಕಿಹೊಳಿ ಕ್ಷಮೆಕೇಳಿ ತನ್ನ ಮಾತನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು. ಸತೀಶ್ ಜಾರಕಿಹೊಳಿ ತನ್ನ ಹೇಳಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಹೇಳಿಕೆ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳಬೇಕು. ಕಾಂಗ್ರೆಸ್ ತನ್ನ ಜವಾಬ್ದಾರಿ ಪ್ರದರ್ಶಿಸಬೇಕು. ಕ್ಷಮೆಕೇಳಿ ಇಲ್ಲವೇ ಕಾರ್ಯಾದ್ಯಕ್ಷ ಸ್ಥಾನದಿಂದ ಉಚ್ಛಾಟಿಸಿ. ಕಾಂಗ್ರೆಸ್ ಪಕ್ಷದ ಹಿಂದೂಗಳು ಜಾಗೃತರಾಗಬೇಕು. ಧರ್ಮದ ವಿಚಾರದಲ್ಲಿ ರಾಜಕೀಯ ಹೇಳಿಕೆಗಳು ಸರಿಯಲ್ಲ. ಕಾಂಗ್ರೆಸ್ ಪಕ್ಷ ಈ ಮಾತನ್ನು ಒಪ್ಪದಿದ್ದರೆ ಸ್ಪಷ್ಟಪಡಿಸಬೇಕು ಎಂದು ಶಾಸಕರು ಒತ್ತಾಯ ಮಾಡಿದರು.
ಕಾಂಗ್ರೆಸ್‍ನ ಹಿಂದೂಗಳು ಜಾರಕಿಹೊಳಿ ಹೇಳಿಕೆಯನ್ನು ಸಹಿಸಿಕೊಳ್ಳುತ್ತೀರಾ? ಕಾಂಗ್ರೆಸ್‍ನ ಮಾನಸಿಕತೆ ಏನು ಎಂಬುದು ಸ್ಪಷ್ಟವಾಗಬೇಕು. ಕಾಂಗ್ರೆಸ್‍ನ ಕಾರ್ಯಕರ್ತರು ಜಾರಕಿಹೊಳಿಯ ಹೇಳಿಕೆ ವಿರುದ್ಧ ಧನಿ ಎತ್ತಬೇಕು ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ಬಿಜೆಪಿಯ ಜಿಲ್ಲಾ ಮಟ್ಟದ ನಾಯಕರು ನಗರ ಸಭೆಯ ಪ್ರತಿನಿಧಿಗಳು ಬಿಜೆಪಿ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.