ನವದೆಹಲಿ: ಭಾರತದ ಮಹಿಳಾ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಜಿಮ್‍ನಲ್ಲಿ ದೇಹ ದಂಡಿಸುತ್ತಿದ್ದಾರೆ. ಟೆನ್ನಿಸ್ ಕದನಕ್ಕೆ ನುಗ್ಗಲು ಸಿದ್ಧತೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
32 ವರ್ಷದ ಅನುಭವಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ತಮ್ಮ ಚೊಚ್ಚಲ ತಾಯ್ತನದ ಬಳಿಕ ಟೆನ್ನಿಸ್ ವೃತ್ತಿ ಬದುಕಿನಿಂದ ದೂರವೇ ಉಳಿದಿದ್ದರು. ಪ್ಯಾರಿಸ್ ಪ್ರವಾಸ ಮುಗಿಸಿ ಕೆಲ ದಿನಗಳ ಹಿಂದಷ್ಟೇ ತಾಯ್ನಾಡಿಗೆ ಹಿಂದಿರುಗಿರುವ ಸಾನಿಯಾ, ಸಂದರ್ಶನವೊಂದರಲ್ಲಿ ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ನಮ್ಮ ಗುರಿ ಎಂದು ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ಅರ್ಹತೆ ಪಡೆಯಲು ಟೆನ್ನಿಸ್ ತಾರೆ ಭರ್ಜರಿ ತಯಾರಿಯಲ್ಲಿ ನಡೆಸಿದ್ದಾರೆ.
Advertisement
https://www.instagram.com/p/B208sxWFkbW/
Advertisement
ಸಾನಿಯಾ ಮಿರ್ಜಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ವರ್ಕೌಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಟಿಶರ್ಟ್ ಹಾಗೂ ಕೆಂಪು ಪ್ಯಾಂಟ್ ಧರಿಸಿ ವರ್ಕೌಟ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಸಾನಿಯಾ ತಮ್ಮ ದೇಹತ ತೂಕ ಇಳಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ.
Advertisement
ಮಗುವಿಗೆ ಜನ್ಮ ನೀಡುವ ಮುನ್ನ ನನ್ನ ದೇಹದ ತೂಕ ಏರಿಕೆ ಬಗ್ಗೆ ಪ್ರಶ್ನಿಸಿದ್ದರು. ಈಗ ತೂಕ ಇಳಿಕೆ ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ನಾನು ನನ್ನ ಮಗುವಿಗೆ ಜನ್ಮ ನೀಡಿದ ಬಳಿಕ 23 ಕೆಜಿ ತೂಕ ಇಳಿಯಬೇಕೆಂದು ಗುರಿ ಹೊಂದಿದ್ದೆ. ಅದರಂತೆ ನಾನು 26 ಕೆಜಿ ಇಳಿಸಿದೆ. ಇದೆಲ್ಲವೂ ಶ್ರಮ, ಕ್ರಮಶಿಕ್ಷಣ, ಏಕಾಗ್ರತೆ, ಬದ್ಧತೆಯಿಂದಲೇ ಸಾಧ್ಯವಾಯಿತು. ಮಗುವಿಗೆ ಜನ್ಮ ನೀಡಿದ ಬಳಿಕ ಇಷ್ಟೊಂದು ತೂಕ ಇಳಿಸುವುದು ಸಾಮಾನ್ಯವಲ್ಲ. ದಪ್ಪಗಿರುವ ಮಹಿಳೆಯರು ಕಠಿಣ ಶ್ರಮ, ನಿರ್ದಿಷ್ಟ ಮನಸ್ಸಿನಿಂದ ವ್ಯಾಯಾಮ ಕೈಗೊಂಡರೆ ಅವರು ಸಹ ತೂಕ ಇಳಿಸುತ್ತಾರೆ. ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ಜಿಮ್‍ನಲ್ಲಿ ಶ್ರಮವಹಿಸಿ ಬಳಿಕ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತೆ ಎಂದು ಸಾನಿಯಾ, ಮಹಿಳೆಯರಿಗೆ ಕಿವಿ ಮಾತು ಹೇಳಿದ್ದಾರೆ.
Advertisement
https://www.instagram.com/p/B2yXA-Alrmo/
ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟರ್ ಶೋಯಬ್ ಮಲಿಕ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಬಳಿಕ 2017ರಲ್ಲಿ ಸಾನಿಯಾ ಭಾರತದ ಪರ ಚೀನಾ ಓಪನ್‍ನಲ್ಲಿ ಕೊನೆಯಬಾರಿ ಆಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಇಜಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದಾರೆ.