ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು

Public TV
2 Min Read
LOVER 1

ವಾಷಿಂಗ್ಟನ್: ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತಲೇ ಇರುತ್ತವೆ. ಘಟನೆ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಆದರೆ ಇವುಗಳ ಹಿಂದಿನ ಪಿತೂರಿ ಬಹಿರಂಗಗೊಂಡಾಗ ಆಶ್ಚರ್ಯವನ್ನುಂಟು ಮಾಡುತ್ತವೆ. ಇಂತಹದ್ದೇ ಘಟನೆ ಈಗ ಅಮೆರಿಕದಲ್ಲಿ ನಡೆದಿದೆ. ಜೈಲಿನಲ್ಲಿದ್ದ ಪ್ರಿಯಕರನ ಮೇಲೆ ಪ್ರೀತಿ ತೋರಿಸಲು ಹೋದ ಮಹಿಳೆ ತಾನೇ ಜೈಲು ಪಾಲಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

Women 2

ಹೌದು ಜೈಲಿನಲ್ಲಿದ್ದ ಪ್ರಿಯಕರನನ್ನು ನೋಡಲು ಹೋದ ಮಹಿಳೆ, ಅವನಿಗೆ ಕೊಟ್ಟ ಒಂದೇ ಒಂದು ಮುತ್ತಿನಿಂದಾಗಿ ಪ್ರಿಯಕರ ಜೈಲಿನಲ್ಲೇ ಸಾವನ್ನಪ್ಪಿದ್ದಾನೆ. ಇದು ಸಂಭವಿಸಿರುವುದು ಅಮೆರಿಕದ ಟೆನ್ನೆಸ್ಸಿಯಲ್ಲಿ. ಈ ಪ್ರಕರಣದಲ್ಲಿ ಮೃತಪಟ್ಟಿರುವವನು ಜಾಷುಯಾ ಬ್ರೌನ್ ಹಾಗೂ ಸಾವಿಗೆ ಕಾರಣವಾಗಿ ಈಗ ಜೈಲು ಪಾಲಾಗಿರುವ ಮಹಿಳೆ ರಾಷೆಲ್ ಡೊಲ್ಲಾರ್ಡ್. ಇದನ್ನೂ ಓದಿ: ಟಿಎಂಸಿ ನಾಯಕನಿಗೆ ಶೂನಲ್ಲಿ ಹೊಡೆಯುತ್ತೇವೆ: ವಿವಾದ ಸೃಷ್ಟಿಸಿದ ದಿಲೀಪ್ ಘೋಷ್ ಹೇಳಿಕೆ

ಅಷ್ಟಕ್ಕೂ ಪ್ರಿಯಕರನನ್ನು ಕೊಲ್ಲಲು ಪ್ರೇಯಸಿ ಜೈಲಿಗೆ ಹೋಗಿರಲಿಲ್ಲ ಅಥವಾ ಚುಂಬಿಸಿದ್ದು ಆತನನ್ನು ಸಾಯಿಸಲು ಅಲ್ಲ, ಅವಳ ಉದ್ದೇಶ ಒಳ್ಳೆಯದ್ದೇ ಇತ್ತು. ಅಪರೂಪಕ್ಕೆ ಕಾಣಸಿಕ್ಕ ಪ್ರಿಯತಮನ ಮೇಲೆ ಪ್ರೀತಿ ಉಕ್ಕಿ ಮುತ್ತು ಕೊಟ್ಟಿದ್ದಳಷ್ಟೇ. ಆದರೆ ಅಲ್ಲಿ ಆಗಿದ್ದೇ ಬೇರೆ.

Women 1

ಏನಿದು ಘಟನೆ?
ತನ್ನ ಪ್ರಿಯಕರ ಡ್ರಗ್ಸ್ ಪ್ರಿಯ. ಇದೇ ಕೇಸ್‌ನಲ್ಲಿ ಆತ ಜೈಲು ಸೇರಿದ್ದ. 11 ವರ್ಷಗಳ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸುತ್ತಿದ್ದ. 2029ರ ವರೆಗೆ ಅವನಿಗೆ ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿ ಡ್ರಗ್ಸ್ ಸಿಗದೇ ಒದ್ದಾಡುತ್ತಿದ್ದ. ಇದನ್ನು ನೋಡಲಾಗದ ಪ್ರಿಯತಮೆ ಬಾಯಲ್ಲಿ ಡ್ರಗ್ಸ್ ಇಟ್ಟುಕೊಂಡು ಹೋಗಿದ್ದಳು. ಪ್ರಿಯತಮನಿಗೆ ಇಷ್ಟವಾದ ಹಲವಾರು ಬಗೆಯ ಡ್ರಗ್ಸ್ ಆಕೆಯ ಬಾಯಲ್ಲಿ ಇತ್ತು. ಕಿಸ್ ಕೊಡುವ ನೆಪದಲ್ಲಿ ತನ್ನ ಬಾಯಿಯಿಂದ ಆತನ ಬಾಯಿಗೆ ಡ್ರಗ್ಸ್ ಹಾಕುವ ಪ್ಲ್ಯಾನ್ ಈಕೆ ಮಾಡಿದ್ದಳು.

Women

ಆದರೆ ಅಪರೂಪಕ್ಕೆ ತನಗೆ ಡ್ರಗ್ಸ್ ಸಿಕ್ಕಿದ ಖುಷಿಗೆ ಈ ಪ್ರಿಯಕರ 14 ಗ್ರಾಂ ಗಳಷ್ಟು ಡ್ರಗ್ಸ್ ಅನ್ನೂ ಒಟ್ಟಿಗೇ ನುಂಗಿಬಿಟ್ಟಿದ್ದಾನೆ. ಅದೇ ವಿಷವಾಗಿ ಪರಿಣಮಿಸಿದೆ. ಒಟ್ಟಿಗೇ ಅಷ್ಟೊಂದು ಮಾದಕದ್ರವ್ಯ ಸೇವನೆ ಮಾಡಿದ್ದರಿಂದ ಅದು ಆತನ ಹೊಟ್ಟೆ ಸೇರುತ್ತಲೇ ವಿಷವಾಗಿ ಕೂಡಲೇ ಪ್ರಾಣ ಬಿಟ್ಟಿದ್ದಾನೆ. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

ಆತ ಹೇಗೆ ಪ್ರಾಣ ಬಿಟ್ಟ ಎಂಬ ಬಗ್ಗೆ ತನಿಖೆ ಮಾಡಿದಾಗ ವಿಷಯ ಬಹಿರಂಗಗೊಂಡಿದೆ. ಅವನ ಹೊಟ್ಟೆಯಲ್ಲಿ ಡ್ರಗ್ಸ್ ಪತ್ತೆಯಾಗಿದ್ದು, ಪ್ರೇಯಸಿ ಸಿಕ್ಕಿಬಿದ್ದಿದ್ದಾಳೆ. ಈ ಹಿಂದೆ ಕೂಡ ಇದೇ ರೀತಿ ಕಿಸ್ ಮಾಡುವ ಮೂಲಕ ಡ್ರಗ್ಸ್ ನೀಡಿದ್ದಳು ಎನ್ನುವ ವಿಷಯ ಕೂಡ ಇದೀಗ ಬಹಿರಂಗಗೊಂಡಿದೆ. ಈ ಕೇಸ್ ನಲ್ಲಿ ಪ್ರಿಯತಮೆಗೆ ಶಿಕ್ಷೆ ವಿಧಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *