ಕಾರವಾರ: ಅಕ್ರಮವಾಗಿ ಸಾಗಾಟ ಮಾಡುತಿದ್ದ ಹತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 14 ಸಾಗುವಾನಿ ಮರದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹತ್ತು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹಳಿಯಾಳದ ಅಜಮಾನಳ ತಾಂಡದ ಕಾಳಗಿನ ಕೊಪ್ಪ ಬಳಿ ನಡೆದಿದೆ.
ಬಂಧಿತರಿಂದ ನಾಲ್ಕು ಚಕ್ರದ ಎರಡು ವಾಹನ ಹಾಗೂ ಎರಡು ದ್ವಿಚಕ್ರ ವಾಹನ ಜೊತೆಯಲ್ಲಿ ಕೃತ್ಯಕ್ಕೆ ಬಳಿದ ಗರಗಸ ವಶಕ್ಕೆ ಪಡೆಯಲಾಗಿದೆ.
Advertisement
ಆರೋಪಿಗಳು ಸಾಗುವಾನಿ ತುಂಡುಗಳನ್ನು ಕತ್ತರಿಸಿ ವಾಹನದಲ್ಲಿ ತುಂಬಿ ಸಾಗಿಸುತ್ತಿರುವ ವೇಳೆ ಅರಣ್ಯಾಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದರು. ಹತ್ತು ಮಂದಿ ಮಾಲು ಸಮೇತ ಸಿಲುಕಿಕೊಂಡಿದ್ದಾರೆ. ನಾಲ್ಕು ಜನ ಪರಾರಿಯಾಗಿದ್ದಾರೆ.