– ಮೂರು ದಿನಗಳ ಕಾಲ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ
ಬೆಂಗಳೂರು: ಬಿಜೆಪಿ (BJP) ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳು ಟೆಂಪಲ್ ರನ್ ಪ್ರಾರಂಭಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ (HD Deve Gowda) ಕುಟುಂಬ ಇಂದಿನಿಂದ ಮೂರು ದಿನಗಳ ಕಾಲ ದೇವಾಲಯಗಳಲ್ಲಿ (Temple) ವಿಶೇಷ ಪೂಜೆ ಸಲ್ಲಿಸಲಿದೆ.
ದೆಹಲಿಯಲ್ಲಿ (New Delhi) ಬಿಜೆಪಿ ಹೈಕಮಾಂಡ್ ಜೊತೆ ಅಂತಿಮ ಮಾತುಕತೆಗೂ ಮುನ್ನ ದೇವೇಗೌಡರ ಕುಟುಂಬ ದೇವರ ಮೊರೆ ಹೋಗುತ್ತಿದೆ. ಇಂದಿನಿಂದ ದೇವಾಲಯಗಳಿಗೆ ಯಾತ್ರೆ ಆರಂಭ ಮಾಡಿದ್ದು, ಜನವರಿ 27ರವರೆಗೆ ಕುಟುಂಬಸ್ಥರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಧರ್ಮಸ್ಥಳ (Dharmasthala), ಕುಕ್ಕೆ ಸುಬ್ರಹ್ಮಣ್ಯ (Kukke Subrahmanya) ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡು ದಿನ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ವಿಶೇಷ ಪೂಜೆ ಬಳಿಕ ದೇವೇಗೌಡರು ಹಾಗೂ ಕುಟುಂಬಸ್ಥರು ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ರಿಯಾಯಿತಿ ದರದಲ್ಲಿ ಅಯೋಧ್ಯೆಗೆ ಟೂರ್ ಪ್ಲ್ಯಾನ್- ಬಿಜೆಪಿಗೆ ಕಾಂಗ್ರೆಸ್ ಟಕ್ಕರ್
ದೇವೇಗೌಡರ ಟೆಂಪಲ್ ರನ್ ಡಿಟೇಲ್ಸ್:
ಜನವರಿ 25– ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಕೆ, ಧರ್ಮಸ್ಥಳದಲ್ಲಿ ವಾಸ್ತವ್ಯ.
ಜನವರಿ 26– ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಕುಕ್ಕೆಯಲ್ಲಿ ವಾಸ್ತವ್ಯ.
ಜನವರಿ 27– ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಕೆ, ಬೆಂಗಳೂರಿಗೆ ವಾಪಸ್.