ಮಂಡ್ಯ/ಮೈಸೂರು: ಚಂದ್ರ ಗ್ರಹಣದ ಲಾಭ ಪಡೆದ ಖದೀಮರು ಮಂಡ್ಯದಲ್ಲಿ ಲಕ್ಷ್ಮಿ ದೇವಾಯಲಕ್ಕೆ ಕನ್ನ ಹಾಕಿದ್ದು, ಮೈಸೂರಿನಲ್ಲಿ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮಿದೇವಿ ದೇವಾಲಯದಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳರು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರುವುದಿಲ್ಲ ಎಂದು ದೇವಾಲಯದ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಬಳಿಕ ಚಿನ್ನಾಭರಣ ಮತ್ತು ಹುಂಡಿಯ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
Advertisement
Advertisement
ಲಕ್ಷ್ಮಿದೇವಿ ವಿಗ್ರಹದ ಬೆಳ್ಳಿ ಕಣ್ಣು, ಮೂರು ಚಿನ್ನದ ತಾಳಿ ಮತ್ತು 2 ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Advertisement
ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ 8 ಅಂಗಡಿಗಳಲ್ಲಿ ಕಳ್ಳರು ದೋಚಿದ್ದಾರೆ. ಮೆಡಿಕಲ್ ಸ್ಟೋರ್, ಸ್ಟೇಷನರಿ, ಪ್ರಾವಿಷನ್ ಸ್ಟೋರ್ ಗಳ ರೋಲಿಂಗ್ ಶಟರ್ ಗಳನ್ನು ಮೀಟಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ನಡೆದ ಸ್ಥಳಕ್ಕೆ ಕುವೆಂಪು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement