ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಕಳೆದ 30 ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳನ್ನು ಕೊಡುವ ಮೂಲಕ ಹೆಸರು ಸಂಪಾದಿಸಿದ್ದಾರೆ. ಹಲವು ಕೋಟಿ ಆಸ್ತಿಯನ್ನು ಸಂಪಾದಿಸಿದ್ದಾರೆ. ಇದೀಗ ಅವರು 16 ಕೋಟಿ ರೂ. ಮೌಲ್ಯದ ಪ್ರಾಪಟಿಯನ್ನು ಊಟಿಯಲ್ಲಿ ಖರೀದಿಸಿದ್ದಾರೆ.
ಚಿರಂಜೀವಿ ಅವರು ಈಗಾಗಲೇ ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವೆಡೆ ಆಸ್ತಿ ಹೊಂದಿದ್ದಾರೆ. ಇದೀಗ ಅವರು ಊಟಿಯ (Ooty) ಗುಡ್ಡದ ಪ್ರದೇಶದಲ್ಲಿ ನಟ 6 ಎಕರೆ ಜಾಗವನ್ನು ಖರೀದಿಸಿದ್ದಾರೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಈ ಜಾಗಕ್ಕೆ ಅವರು 16 ಕೋಟಿ ರೂ. ನೀಡಿದ್ದಾರೆ. ಇದನ್ನೂ ಓದಿ:’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್
- Advertisement
- Advertisement
ಅಂದಹಾಗೆ, ‘ವಿಶ್ವಾಂಭರ’ ಸಿನಿಮಾದಲ್ಲಿ ಚಿರಂಜೀವಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ತ್ರಿಷಾ, ಆಶಿಕಾ ರಂಗನಾಥ್ ಸೇರಿದಂತೆ ಹಲವು ನಟಿಸುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ.