ಟಾಲಿವುಡ್ ನ ಖ್ಯಾತ ನಟ ಬಾಲಕೃಷ್ಣ ಅವರ 107ನೇ ಸಿನಿಮಾದ ಎರಡನೇ ಹಂತದ ಶೂಟಿಂಗ್ ನಡೆದಿದೆ. ಈ ಸಂದರ್ಭದಲ್ಲಿ ಆ ಚಿತ್ರಕ್ಕೆ ಹೆಸರು ಘೋಷಣೆ ಆಗಿದೆ. ಬಾಲಕೃಷ್ಣ ಅವರ ಈ ಚಿತ್ರಕ್ಕೆ ಹಲವು ಶೀರ್ಷಿಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಈ ಸಿನಿಮಾಗೆ ಅಣ್ಣಾಗಾರು ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಬೇರೆ ಹೆಸರು ಇಡುವ ಮೂಲಕ ಕುತೂಹಲ ಮೂಡಿಸಿದೆ ಚಿತ್ರತಂಡ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ
Advertisement
ಸಾಮಾನ್ಯವಾಗಿ ಕಲಾವಿದರು ತಮ್ಮ ಹೆಸರಿನ ಚಿತ್ರಗಳಲ್ಲಿ ನಟಿಸಲು ಉತ್ಸುಕರಾಗಿತ್ತಾರೆ. ಅದೊಂದು ಸೌಭಾಗ್ಯದ ಕ್ಷಣವೆಂದು ಭಾವಿಸುತ್ತಾರೆ. ಹಾಗಾಗಿ ಬಾಲಕೃಷ್ಣ ಅವರ 107ನೇ ಚಿತ್ರಕ್ಕೆ ‘ಜೈ ಬಾಲಯ್ಯ’ ಎಂದು ಹೆಸರಿಡುವ ಮೂಲಕ ಚಿತ್ರತಂಡ ಬಾಲಕೃಷ್ಣ ಅವರು ಗೌರವ ಸೂಚಿಸಿದೆ. ಬಾಲಕೃಷ್ಣ ಅವರ ಅಭಿಮಾನಿಗಳು ಕೂಡ ಈ ಟೈಟಲ್ ಕೇಳಿ ‘ಜೈ ಬಾಲಯ್ಯ’ ಎಂದು ಹಾರೈಸಿದ್ದಾರೆ. ಇದನ್ನೂ ಓದಿ : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್
Advertisement
Advertisement
ಈ ಸಿನಿಮಾದ ವಿಶೇಷತೆ ಅಂದರೆ, ಮೊದಲ ಬಾರಿಗೆ ಈ ಚಿತ್ರದ ಮೂಲಕ ಕನ್ನಡದ ನಟ ದುನಿಯಾ ವಿಜಯ್ ತೆಲುಗು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ವಿಲನ್ ಪಾತ್ರ ಮಾಡಿದ್ದಾರೆ. ಈಗಾಗಲೇ ಎರಡು ಹಂತದ ಶೂಟಿಂಗ್ ನಲ್ಲೂ ವಿಜಯ್ ಪಾಲ್ಗೊಂಡಿದ್ದಾರೆ. ವಿಜಯ್ ಖಡಕ್ ವಿಲನ್ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರದ ಲುಕ್ ಕೂಡ ರಿವಿಲ್ ಆಗಿದೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ
Advertisement
ಬಾಲಕೃಷ್ಣ ನಾಯಕನಾಗಿ ನಟಿಸುತ್ತಿದ್ದರೆ, ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗೋಪಿಚಂದ್ ಮೆಲಿನೇನಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.