ಆಗಸ್ಟ್ 1 ರಿಂದ ತೆಲುಗು ಸಿನಿಮಾ ರಂಗವನ್ನು ಬಂದ್ ಮಾಡುವುದಾಗಿ ಎಟಿಎಫ್ಪಿಜಿ (ಆಕ್ಟಿವ್ ತೆಲುಗು ಫಿಲ್ಮ್ ಪ್ರೊಡ್ಯುಸರ್ಸ್ ಗಿಲ್ಡ್) ತಿಳಿಸಿದೆ. ಕೊರೊನಾ ನಂತರದಲ್ಲಿ ತೆಲುಗು ಚಿತ್ರೋದ್ಯಮ ಭಾರೀ ನಷ್ಟವನ್ನು ಅನುಭವಿಸುತ್ತಿದೆಯಂತೆ. ಈಗಾಗಲೇ ಹಲವಾರು ಚಿತ್ರಮಂದಿರಗಳು ಮುಚ್ಚಿದ್ದು, ಮತ್ತಷ್ಟು ಚಿತ್ರಮಂದಿರಗಳು ಮುಚ್ಚುವ ಹಂತದಲ್ಲಿವೆ. ಜೊತೆಗೆ ನಾನಾ ಸಮಸ್ಯೆಗಳಿಂದಾಗಿ ಸಿನಿಮಾಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಅನೇಕ ಕಾರಣಗಳಿಂದಾಗಿ ಚಿತ್ರೋದ್ಯಮ ಬಂದ್ ಮಾಡಲು ನಿರ್ಧರಿಸಲಾಗಿದೆ.
ಕೊರೋನಾ ನಂತರ ಸಿನಿಮಾ ಟಿಕೆಟ್ ದರದ ನಿಯಂತ್ರಣ, ಸ್ಟಾರ್ ನಟರ ಸಂಭಾವನೆ, ಮಿತಿಮೀರಿದ ಖರ್ಚು ಹಾಗೂ ಸರಕಾರದ ಕೆಲ ನಡೆಗಳಿಂದಾಗಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರಂತೆ. ಅಲ್ಲದೇ, ತೆಲುಗಿನ ಕೆಲ ಸ್ಟಾರ್ ನಟರು ಸಂಭಾವನೆಯನ್ನು ಹೆಚ್ಚಿಸಿಕೊಂಡು ನಿರ್ಮಾಪಕರಿಗೆ ಹೊರೆಯಾಗಿದ್ದಾರಂತೆ. ಇವೆಲ್ಲವೂ ಸರಿ ಹೋಗುವತನಕ ಸಿನಿಮಾ ಶೂಟಿಂಗ್ ನಡೆಸಬಾರದು ಎಂದು ನಿರ್ಮಾಪಕರಿಗೆ ತಿಳಿಸಲಾಗಿದೆ. ಹೊಸ ಸಿನಿಮಾ ಶುರು ಮಾಡಬಾರದು ಎಂದೂ ತಿಳಿಸಲಾಗಿದೆ. ಇದನ್ನೂ ಓದಿ:ರಾಕೇಶ್ ಬಾಪಟ್ ಜೊತೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ
- Advertisement
- Advertisement
ಮೊದ ಮೊದಲು ಸರಕಾರ ಮತ್ತು ಸಿನಿಮಾ ರಂಗದ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಟಿಕೆಟ್ ದರದ ವಿಚಾರದಲ್ಲಂತೂ ಸರಕಾರ ಮತ್ತು ನಿರ್ಮಾಪಕರ ನಡುವೆ ಹಲವು ಸಭೆಗಳು ನಡೆದರೂ, ಅದನ್ನು ಸರಿ ಮಾಡಲು ಆಗದೇ ಇರುವಂತಹ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು. ಇದರಿಂದ ಬೇಸತ್ತ ಹಲವು ನಿರ್ಮಾಪಕರು ಸಿನಿಮಾ ಮಾಡುವುದನ್ನೆ ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಬಜೆಟ್ ಕೂಡ ಹಿಗ್ಗುತ್ತಿರುವುದರಿಂದ ಬಂದ್ ಮಾಡುವುದು ಅನಿವಾರ್ಯ ಎಂದು ನಿರ್ಮಾಪಕರ ಗಿಲ್ಡ್ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದೆ.