ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್(Ban) ವಿಚಾರವಾಗಿ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ತೆಲುಗಿನಲ್ಲೂ ಹೊಸ ವಿವಾದವೊಂದು ರಶ್ಮಿಕಾ ಹೆಗಲೇರಿದೆ. ಕನ್ನಡದ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳಿಲ್ಲ ಎಂದು ನಟಿಯ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ತೆಲುಗಿನ ಖ್ಯಾತ ಬರಹಗಾರ ತೋಟಾ ಪ್ರಸಾದ್ ಕೂಡ ರಶ್ಮಿಕಾ ವಿರುದ್ಧ ಕಿಡಿಕಾರಿದ್ದಾರೆ. ರಕ್ಷಿತ್ ಮಾತ್ರವಲ್ಲ, ನಾಗಶೌರ್ಯ ಅವರನ್ನು ಕೂಡ ರಶ್ಮಿಕಾ ಕಡೆಗಣಿಸಿದ್ದಾರೆ ಎಂದು ಮಾತನಾಡಿದ್ದಾರೆ.
Advertisement
ಕೊಡಗಿನ ಕುವರಿ ರಶ್ಮಿಕಾ ತಮ್ಮ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯನ್ನ ಚಿತ್ರತಂಡವನ್ನ ಕಡೆಗಣಿಸಿದ್ದರು. ಇತ್ತೀಚಿಗೆ ರಶ್ಮಿಕಾ ನೀಡಿದ ಸಂದರ್ಶನ, ಕರ್ನಾಟಕದಲ್ಲಿ ಸಾನ್ವಿ ವಿರುದ್ಧ ಸಂಚಲನ ಸೃಷ್ಟಿಸಿತ್ತು. ಈ ವಿವಾದದ ಬೆನ್ನಲ್ಲೇ ತೆಲುಗಿನ ನಟ ನಾಗಶೌರ್ಯ(Nagashourya) ಅವರನ್ನು ಕೂಡ ನಟಿ ಕಡೆಗಣಿಸಿದ್ದರು ಎಂದು ತೋಟಾ ಪ್ರಸಾದ್ (Thota Prasad) ಕಿಡಿಕಾರಿದ್ದಾರೆ.
Advertisement
Advertisement
ರಶ್ಮಿಕಾ, ರಕ್ಷಿತ್ ಶೆಟ್ಟಿ (Rakshith Shetty) ಜೊತೆಗೆ ಬ್ರೇಕಪ್ ಮಾಡಿಕೊಂಡ ಮೇಲಿಂದ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ. ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದರಲ್ಲಿ ತನ್ನ ಮಾಜಿ ಬಾಯ್ ಫ್ರೆಂಡ್ ರಕ್ಷಿತ್ ಅವರನ್ನು ವ್ಯಂಗ್ಯ ಮಾಡುವ ಭರದಲ್ಲಿ ತನ್ನ ಮೊದಲ ಸಿನಿಮಾದ ಬಗ್ಗೆ ಸನ್ನೆ ಮೂಲಕ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಮಾತನಾಡಿದ್ದರು. ಆಮೇಲೆ ತನ್ನ ಮಾತನ್ನು ತಿರುಚಲಾಗಿದೆ ಎಂದು ಬೇಸರದಲ್ಲಿ ಒಂದು ನೋಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡರು. ಆದರೆ ಅವರ ಈ ಧಿಮಾಕಿನ ಉತ್ತರ ರಿಷಬ್ ಶೆಟ್ಟಿ ಸೇರಿದಂತೆ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ನೋವು ತಂದಿತ್ತು. ಕರ್ನಾಟಕದವರೆಲ್ಲ ರಶ್ಮಿಕಾ ಅವರನ್ನು ವಿರೋಧಿಸಲು ಶುರು ಮಾಡಿದರು. ಅವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡುವ ಮಾತುಗಳು ಬಂದವು. ಇದನ್ನೂ ಓದಿ: ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಮೆಚ್ಚಿಕೊಂಡ ಪ್ರಬುದ್ಧ ಪ್ರೇಕ್ಷಕ
Advertisement
ಇದೀಗ ಪಕ್ಕದ ತೆಲುಗು ಇಂಡಸ್ಟ್ರಿಯಲ್ಲೂ (Telagu Industry) ರಶ್ಮಿಕಾ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ತೆಲುಗಿನ ಖ್ಯಾತ ಸಿನಿಮಾ ಬರಹಗಾರ ತೋಟಾ ಪ್ರಸಾದ್ ಸಂದರ್ಶನವೊಂದರಲ್ಲಿ ರಶ್ಮಿಕಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಕನ್ನಡ ಮಾತ್ರವಲ್ಲ ತೆಲುಗು ನಟನ ಕುರಿತೂ ಧಿಮಾಕಿನಿಂದ ರೀತಿ ನಡೆದುಕೊಂಡಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ತೋಟಾ ಪ್ರಸಾದ್ ಒಂದು ವೇಳೆ ರಶ್ಮಿಕಾ ಮಂದಣ್ಣಗೆ ಬ್ರೇಕಪ್ ಆದ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದರೆ ಬೇಡ, ಅವರ ಹೆಸರು ಹೇಳೋದು ಬೇಡ, ಆದರೆ ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನು ಹೇಳಬಹುದಿತ್ತು ಇಲ್ವಾ ಸಿನಿಮಾ ಹೆಸರನ್ನಾದರೂ ಹೇಳಬಹುದಿತ್ತು.
ಈಕೆ ಕನ್ನಡ ಮಾತ್ರವಲ್ಲ ತೆಲುಗಿನ ಮೊದಲ ಸಿನಿಮಾಗೂ ಹೀಗೆ ಮಾಡಿದ್ದಾರೆ. ತೆಲುಗಿನ ಡೆಬ್ಯೂ ಚಿತ್ರಕ್ಕೆ ನಾಗಶೌರ್ಯಗೆ ನಾಯಕಿಯಾಗಿದ್ದು ಈ ನಟಿ. ಈ ಚಿತ್ರದ ವಾರ್ಷಿಕೋತ್ಸವದ ಕುರಿತು ಟ್ವೀಟ್ ಮಾಡಿದ್ದ ರಶ್ಮಿಕಾ, ನಿರ್ದೇಶಕನ ಹೆಸರನ್ನ ಬರೆದಿದ್ದರು. ಆದರೆ ನಾಗಶೌರ್ಯ ಹೆಸರು ಹೇಳಿರಲಿಲ್ಲ. ಎಷ್ಟೇ ಬೆಳೆದರು ನಮಗೆ ಮೊದಲ ಅವಕಾಶ ಕೊಟ್ಟವರನ್ನು ಮರೆಯಬಾರದು ಎಂದು ತೋಟಾ ಪ್ರಸಾದ್ ಮಾತನಾಡಿದ್ದಾರೆ.