ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ(Balayya) ಪುತ್ರ (Son) ಅದ್ಯಾವಾಗ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಸೆಲೆಬ್ರಿಟಿ ಜ್ಯೋತಿಷಿ ಈಗ ಶಾಕಿಂಗ್ ಸುದ್ದಿಯೊಂದನ್ನ ಬಿಚ್ಚಿಟ್ಟಿದ್ದಾರೆ. ಬಾಲಯ್ಯ ಪುತ್ರ ಈಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ ಅಂತಾ ಭವಿಷ್ಯ ನುಡಿದಿದ್ದಾರೆ. ಜ್ಯೋತಿಷಿ ವೇಣು ಸ್ವಾಮಿ (Venu Swamy) ಮಾತು ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಇದನ್ನೂ ಓದಿ:ಸ್ಪಂದನಾ ನಿಧನ : ವಿಜಯ ರಾಘವೇಂದ್ರ ನಟನೆ ‘ಕದ್ದಚಿತ್ರ’ ರಿಲೀಸ್ ಮುಂದಕ್ಕೆ
ಬಾಲಯ್ಯ ಪುತ್ರ ಮೋಕ್ಷಜ್ಞ ತೇಜ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಆದರೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ, ಬಾಲಯ್ಯ ಅಭಿಮಾನಿಗಳನ್ನು ಮತ್ತಷ್ಟು ನಿರಾಸೆಗೊಳಿಸಿದೆ. ಮೋಕ್ಷಜ್ಞ ತೇಜ (Mokshagna Tej) ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಇನ್ನೂ ಎರಡು ಮೂರು ವರ್ಷ ಬೇಕಾಗಬಹುದು. ತೆಲುಗು ಸಿನಿಮಾಗೆ ಎಂಟ್ರಿ ಕೊಡುವುದಕ್ಕೆ ಇನ್ನೂ ಸಮಯವಿದೆ ಎಂದು ಹೇಳುವ ಮೂಲಕ ಬಾಲಯ್ಯನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.
‘ಅಖಂಡ’ (Akanda) ಸಿನಿಮಾ ವೇಳೆ ಬಾಲಯ್ಯರನ್ನು ವೇಣು ಸ್ವಾಮಿ ಭೇಟಿ ಮಾಡಿದ್ದರು. ಈ ವೇಳೆ ಮಗನ ಜಾತಕ ನೋಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಬಾಲಯ್ಯ ಪುತ್ರನಿಗೆ ಉತ್ತಮ ಭವಿಷ್ಯವಿದೆ. ಸಿನಿಮಾರಂಗದಲ್ಲಿ ಒಳ್ಳೆಯ ಯಶಸ್ಸು ಸಿಗುತ್ತೆ. ಆದರೆ, ರಾಜಕೀಯದಲ್ಲಿ ಅಲ್ಲ ಎಂದು ವೇಣು ಗೋಪಾಲ ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಸಮಂತಾ (Samantha) ವೈವಾಹಿಕ ಜೀವನ ಏರುಪೇರು ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇತ್ತೀಚಿಗೆ ಶ್ರೀಲೀಲಾ ಬಗ್ಗೆ ಮಾತನಾಡಿದ್ದರು. ಸಿನಿಮಾರಂಗದಲ್ಲಿ ಶ್ರೀಲೀಲಾ (Sreeleela) ಭವಿಷ್ಯ ಇನ್ನೂ ಕೆಲವು ವರ್ಷಗಳು ಮಾತ್ರ ಎಂದು ಮಾತನಾಡಿದ್ದರು. ಈಗ ಬಾಲಯ್ಯ ಪುತ್ರನ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ಆಡಿರುವ ಮಾತು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.