ಬಹುಕಾಲದ ಗೆಳೆಯನ ಜೊತೆ ತೆಲುಗು ನಟಿ ಮೇಘಾ ಆಕಾಶ್‌ ನಿಶ್ಚಿತಾರ್ಥ

Public TV
1 Min Read
megha akash

ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮೇಘಾ ಆಕಾಶ್ (Actress Megha Akash)  ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಮೇಘಾ ಆ.22ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ (Engagement) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

FotoJet 53ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು, ನನ್ನ ಹಾರೈಕೆ ನಿಜವಾಯಿತು. ನನ್ನ ಜೀವನದ ಪ್ರೀತಿಯ ಜೊತೆ ಎಂಗೇಜ್ ಆಗಿದ್ದೇನೆ ಎಂದು ನಟಿ ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ‘ಜಿಂಗೋ’ ಆದ ಡಾಲಿ

 

View this post on Instagram

 

A post shared by Megha Akash (@meghaakash)

ಮೇಘಾ ಆಕಾಶ್ ಅವರು ಕಳೆದ 6 ವರ್ಷಗಳಿಂದ ಸಾಯಿ ವಿಷ್ಣು ಅವರನ್ನು ಪ್ರೀತಿಸುತ್ತಿದ್ದರು. ಆ.22ರಂದು ಗುರುಹಿರಿಯರ ಸಮ್ಮುಖದಲ್ಲಿ ನಟಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ನಟಿಯ ಮದುವೆ ಜರುಗಲಿದೆ. ಸದ್ಯ ಈ ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

ಅಂದಹಾಗೆ, ರಜನಿಕಾಂತ್ (Rajanikanth) ನಟನೆಯ ಪೆಟ್ಟಾ, ಸಲ್ಮಾನ್ ಖಾನ್ (Salman Khan) ನಟನೆಯ ರಾಧೆ, ರವಿ ತೇಜಾ ಜೊತೆ ರಾವಣಾಸುರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೇಘಾ ಆಕಾಶ್ ನಟಿಸಿದ್ದಾರೆ.

Share This Article