ತೆಲುಗಿನ ಬಿಗ್ ಬಾಸ್ ಸೀಸನ್ 8ಕ್ಕೆ (Bigg Boss Telugu 8) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ಶೋ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಭಾವಿ ಪತ್ನಿ ಶೋಭಿತಾ (Sobhita) ಜೊತೆ ಸಮಂತಾ (Samantha) ಮಾಜಿ ಪತಿ ನಾಗಚೈತನ್ಯ (Nagachaitanya) ದೊಡ್ಮನೆಗೆ ಬರಲಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ
ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ನಾಗಚೈತನ್ಯ ಮತ್ತು ಶೋಭಿತಾ ಈ ವಾರಾಂತ್ಯ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬರಲಿದ್ದಾರೆ. ವೇದಿಕೆ ಮೇಲೆ ಬಂದು ಹೋಸ್ಟ್ ನಾಗಾರ್ಜುನ ಜೊತೆ ಮಾತನಾಡಿ ತೆರಳುತ್ತಾರಾ? ಅಥವಾ ಬಿಗ್ ಬಾಸ್ ಮನೆಯೊಳಗೆ ಹೋಗ್ತಾರಾ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನೂ ಇದುವರೆಗೂ ನಾಗಚೈತನ್ಯ ಮತ್ತು ಶೋಭಿತಾ ಜೋಡಿ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಬಿಗ್ ಬಾಸ್‌ಗೆ ಜೊತೆಯಾಗಿ ಬಂದರೆ ಟಿಆರ್‌ಪಿ ಕೂಡ ಹೆಚ್ಚುತ್ತದೆ. ಅಭಿಮಾನಿಗಳು ಕೂಡ ಅವರನ್ನು ನೋಡಲು ಶೋನತ್ತ ಆಸಕ್ತಿ ವಹಿಸುತ್ತಾರೆ.
ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.
ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.