ಬೆಂಗಳೂರು: ಮಾವನೇ ತನ್ನ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಜೆಸಿ ನಗರದಲ್ಲಿ ನಡೆದಿದೆ.
ಅಬ್ದುಲ್ ರೆಹಮಾನ್ ಇಲಿಯಾಜ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಮಾವನಾಗಿದ್ದು, ಈತ ಸೊಸೆ ಮುಂದೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತನೆ ತೋರಿದ್ದಾನೆ. ಅಲ್ಲದೇ ನಿನ್ನ ಫಸ್ಟ್ ನೈಟ್ ಎಕ್ಸ್ ಪೀರಿಯನ್ಸ್ ಹೇಳು ಎಂದು ಕಿರುಕುಳ ನೀಡಿದ್ದಾನೆ.
ಕಳೆದ ವರ್ಷ ಮಹಿಳೆಗೆ ಇಲಿಯಾಜ್ ಪುತ್ರ ಅಬ್ದುಲ್ ಹಾದಿ ಜೊತೆ ಮದುವೆ ಆಗಿತ್ತು. ಅಬ್ದುಲ್ ಹಾದಿ ಪದವಿ ಪಡೆದು ಒಳ್ಳೆ ಕೆಲಸದಲ್ಲಿದ್ದೆನೆಂದು ಸುಳ್ಳು ಹೇಳಿ ಮದುವೆ ಆಗಿದ್ದನು. ಆದರೆ ಅಸಲಿಗೆ ಅಬ್ದುಲ್ ಅನಕ್ಷರಸ್ಥನಾಗಿದ್ದು, ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು.
ಇದೀಗ ಮಾವ ಇಲಿಯಾಜ್ ನಿಂದ ಲೈಂಗಿಕ ಕಿರುಕುಳದಿಂದ ಬೇಸತ್ತು ಸಂತ್ರಸ್ತೆ ಜೆಸಿ ನಗರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸದ್ಯ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.