‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

Public TV
2 Min Read
rachitha ram

ಕಿರುತೆರೆಯಲ್ಲೂ ಸ್ಟಾರ್‌ಗಳನ್ನು ಹುಟ್ಟುಹಾಕಬಹುದು ಎಂದು ತೋರಿಸಿಕೊಟ್ಟ ಕರುನಾಡಿನ ಹೆಮ್ಮೆಯ ವಾಹಿನಿ ಝೀ ಕನ್ನಡ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಸದಾ ತಾನು ತರುವ ಸದಭಿರುಚಿಯ ಕಾರ್ಯಕ್ರಮಗಳ ಮುಖಾಂತರ ಕನ್ನಡಿಗರನ್ನ ಸತತ 17 ವರ್ಷಗಳಿಂದ ಮನೋರಂಜಿಸುತ್ತ ಬಂದಿರುವ ಈ ವಾಹಿನಿಯ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋ ಈಗ ಕನ್ನಡಿಗರ ಮುಂದೆ ಬರಲು ಸಕಲ ತಯಾರಿಯೊಂದಿಗೆ ಸಿದ್ಧವಾಗಿದೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

rachitha

ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ನಿಜ ತೊಂದರೆಗಳನ್ನ ಆಧಾರವಾಗಿಟ್ಟುಕೊಂಡು ಹೆಣೆದಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಿರುತೆರೆಯ ಆಯ್ದ ಬ್ಯಾಚುಲರ್ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಬಲ್ ಮಾಡುವ ಪ್ರಯತ್ನದ ಈ ಹೊಸ ರಿಯಾಲಿಟಿ ಶೋನೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಕಾರ್ಯಕ್ರಮವಾಗಿದೆ. ಹತ್ತು ಎಲಿಜಬಲ್ ಬ್ಯಾಚುಲರ್‌ಗಳ ಕನಸುಗಳನ್ನ ನಿಜರೂಪಕ್ಕೆ ತರುತ್ತಾ ಅವರ ಆಸೆಗಳ ಅಖಾಡದಲ್ಲಿ ಅವರ ಗಟ್ಟಿತನವನ್ನ ಕರುನಾಡಿಗೆ ತೋರಿಸುತ್ತಾ ಒಬ್ಬ ಬ್ಯಾಚುಲರ್ ಮದುವೆಗೆ ಎಲಿಜಬಲ್ ಆಗಲು ಏನೆಲ್ಲ ಮಾಡಬೇಕು ಅನ್ನೋದನ್ನ ಕರುನಾಡಿಗೆ ಸಾರುವ ಈ ರಿಯಾಲಿಟಿ ಶೋನ ನಿರೂಪಣೆಯ ಜವಾಬ್ದಾರಿಯನ್ನ ಹೊತ್ತಿರೋದು ನಿರೂಪಕ ಅಕುಲ್ ಬಾಲಾಜಿ (Akul Balaji) ವಿಭಿನ್ನ ಮ್ಯಾನರೀಸಂ ಜೊತೆ ಸಖತ್ ಮಾತುಗಳ ಮೂಲಕ ಮನೋರಂಜನೆ ನೀಡೋಕೆ ರೆಡಿಯಾಗಿರುವ ಅಕುಲ್ ಬಾಲಾಜಿ ಬಹಳ ದಿನಗಳ ನಂತರ ಮತ್ತೆ ವಾಹಿನಿಗೆ ವಾಪಸ್ಸಾಗುತ್ತಿರೋದು ಮತ್ತೊಂದು ಹೈಲೈಟ್.

AKUL BALAJI 2

ಕರ್ನಾಟಕಕ್ಕೆ ಪ್ರೇಮ ಪಾಠ ಹೇಳಿದ, ಪ್ರೇಮಲೋಕ ಸೃಷ್ಟಿಸಿದ ಕರುನಾಡಿನ ರಣಧೀರ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಿದ್ರೆ, ಡಿಂಪಲ್ ಕ್ವೀನ್ ರಚಿತಾರಾಮ್ (Rachitha Ram) ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳುವ ಮುಖಾಂತರ ತೀರ್ಪುಗಾರರು ಖುರ್ಚಿಯ ಗತ್ತನ್ನ ಹೆಚ್ಚುಮಾಡಿದ್ದಾರೆ. ಹತ್ತು ಬ್ಯಾಚುಲರ್‌ಗಳ ಇಷ್ಟ ಕಷ್ಟಗಳ ನಡುವೆ ಹೆಣೆದಿರುವ ಈ ರಿಯಾಲಿಟಿ ಶೋಗೆ ರಾಗ ಸಂಯೋಜನೆ ಮಾಡಿರೋದು ಕರುನಾಡಿನ ರಾಕ್ ಸ್ಟಾರ್ ಚಂದನ್ ಶೆಟ್ಟಿ. ಟೀನೇಜ್ ಹುಡುಗರ ಪಲ್ಸ್ ರೇಟ್‌ ಯಾವಾಗಲು ಜಾಸ್ತಿ ಮಾಡೋ ಹಾಡುಗಳನ್ನ ಕೊಟ್ಟು ಕನ್ನಡಿಗರು ಸದಾ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಚಂದನ್ ಶೆಟ್ಟಿಯವರ ರಾಗ ಸಂಯೋಜನೆಗೆ ರಾಕೇಶ್ ಸಿ.ಎ ಸಾಹಿತ್ಯದ ಈ ಸಾಂಗಿನಲ್ಲಿ ಬ್ಯಾಚುಲರ್‌ಗಳ ಆಸೆ, ಕನಸುಇಷ್ಟ, ಕಷ್ಟ, ತುಮುಲ ಮತ್ತು ತೊಳಲಾಟ ಎಲ್ಲವು ಎದ್ದು ಕಾಣುತ್ತದೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಮಾಡಿರುವ ಈ ಟೈಟಲ್ ಸಾಂಗಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿರೋ ನಮ್ಮ ಬ್ಯಾಚುಲರ್‌ಗಳ ಬಯೋಡೇಟಾ ಕನ್ನಡಿಗರ ಮುಂದೆ ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ ನಿಮ್ಮ ಮನೆಗೆ ಬರಲಿದೆ.

ಸತತ 4 ವರ್ಷಗಳಿಂದ ನಮ್ಮನ್ನ ನಂ.1 ಸ್ಥಾನದಲ್ಲಿ ಇಟ್ಟಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 4ರ ಅಭೂತಪೂರ್ವ ಯಶಸ್ಸಿನ ಬಳಿಕ ಮತ್ತೊಂದು ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್‌ನ ನಿಮ್ಮ ಮುಂದೆ ತರುವ ತಯಾರಿ ಮಾಡಿದ್ದೇವೆ. ಸಮಾಜದಲ್ಲಿ ಬ್ಯಾಚುಲರ್‌ಗಳು ಅನುಭವಿಸೋ ತೊಂದರೆಗಳನ್ನ ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನೋರಂಜನೆ ಸೇರಿಸುತ್ತಾ ಬ್ಯಾಚುಲರ್‌ಗಳ ಸಮಸ್ಯೆಗಳನ್ನ ನಿಮ್ಮ ಮುಂದೆ ಇಡೋ ಪ್ರಯತ್ನವೇ ಈ ಭರ್ಜರಿ ಬ್ಯಾಚುರಲ್ಸ್.

Share This Article