ಬೆಂಗಳೂರು: ಕಿರುತೆರೆ ಧಾರಾವಾಹಿ ‘ರಾಧಾ ರಮಣ’ ಮೂಲಕ ಎಲ್ಲರ ಮನೆ ಮಾತಾಗಿರುವ ರಾಧಾ ಅಂದರೆ ಶ್ವೇತ ಆರ್.ಪ್ರಸಾದ್ ಅವರು ತಮ್ಮ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ತುತ್ತಾ ಮುತ್ತಾ’ ಕಾರ್ಯಕ್ರಮದಲ್ಲಿ ಶ್ವೇತ ತಮ್ಮ ಪತಿ ಆರ್.ಜೆ ಪ್ರದೀಪ ಹಾಗೂ ತಮ್ಮ ತಾಯಿಯೊಂದಿಗೆ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುರುಷರು ತಮ್ಮ ತಾಯಿಯನ್ನು ಕರೆದುಕೊಂಡು ಬರುತ್ತಾರೆ. ಆದರೆ ಈ ಬಾರಿ ಶ್ವೇತ ಅವರು ಈ ಕಾರ್ಯಕ್ರಮಕ್ಕೆ ತಮ್ಮ ತಾಯಿಯನ್ನು ಜೊತೆ ಭಾಗವಹಿಸಿದ್ದಾರೆ.
ಪ್ರೀತಿ ಆಗಿದ್ದು ಹೇಗೆ?
ನಾನು ಹಾಗೂ ಪ್ರದೀಪ ಕಾಲೇಜಿನಲ್ಲಿ ಸ್ನೇಹಿತರಾಗಿದ್ದೇವು. ನಂತರ ಪ್ರದೀಪ ನನಗೆ ಪ್ರಪೋಸ್ ಮಾಡಿದನು. ನನ್ನನ್ನು ಲವ್ ಮಾಡುತ್ತಿರುವುದಾಗಿ ಹೇಳಿಕೊಂಡನು. ನಾನು ಪ್ರದೀಪ ಜೊತೆ ಸಂಜೆ ಹೊತ್ತು ನಡೆದುಕೊಂಡು ಹೋಗುತ್ತಿರುವಾಗ ಆತ ನನಗಾಗಿ ರೇಡಿಯೋದಲ್ಲಿ ಒಂದು ಹಾಡನ್ನು ಡೆಡಿಕೇಟ್ ಮಾಡಿ ತನ್ನ ಫೀಲಿಂಗ್ಸ್ ಹೊರಹಾಕುತ್ತಿದ್ದನು. ಆದರೆ ನಾನು ಆ ಹಾಡಿನ ಕಡೆ ಅಷ್ಟು ಗಮನ ನೀಡಲಿಲ್ಲ. ಪ್ರದೀಪ ಒಂದು ದಿನ ನೇರವಾಗಿ ನನಗೂ ಹೇಳದೇ ನನ್ನ ಮನೆಗೆ ಹೋಗಿದ್ದನು. ಅಲ್ಲದೇ ನನ್ನ ತಂದೆ-ತಾಯಿ ಬಳಿ ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದನು. ಆಗ ಪ್ರದೀಪ ನನ್ನನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಷಯ ತಿಳಿಯಿತು ಎಂದು ಶ್ವೇತ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ವೇತ ಅವರ ಅರಿಶಿಣ ಶಾಸ್ತ್ರ ಕೂಡ ನೇರವೇರಿದೆ. ಪ್ರದೀಪ ಮನೆಯ ಸಂಪ್ರದಾಯದಲ್ಲಿ ಅರಿಶಿಣ ಶಾಸ್ತ್ರ ಇಲ್ಲ. ಹಾಗಾಗಿ ಅವರ ಮದುವೆಯಲ್ಲಿ ಅರಿಶಿಣ ಶಾಸ್ತ್ರ ನಡೆದಿರಲಿಲ್ಲ. ತಮ್ಮ ಮದುವೆಯಲ್ಲಿ ಅರಿಶಿಣ ಶಾಸ್ತ್ರ ನಡೆದಿಲ್ಲ ಎಂದು ಶ್ವೇತ ಹಾಗೂ ಅವರ ತಾಯಿ ಕಾರ್ಯಕ್ರಮದಲ್ಲಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಶ್ವೇತ ಹಾಗೂ ಅವರ ತಾಯಿಯ ಆಸೆಯನ್ನು ನೇರವೇರಿಸಲು ಕಾರ್ಯಕ್ರಮದಲ್ಲಿ ಅರಿಶಿಣ ಶಾಸ್ತ್ರವನ್ನು ಮಾಡಲಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv