ಬಿಕಿನಿ ಧರಿಸಿ ಕುಟುಂಬಸ್ಥರಿಂದ ದೂರವಾದ ನಟಿ

Public TV
1 Min Read
Anjum Fakih

ಮುಂಬೈ: ಅಂಜುಮ್ ಫಕೀಹ ಹಿಂದಿ ಕಿರುತೆರೆಯಲ್ಲಿ ಪರಿಚಿತ ಹೆಸರು. ಸಾಲು ಸಾಲು ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅಂಜುಮ್ ಬಿಕಿನಿ ಧರಿಸಿ ಕ್ಯಾಟ್ ವಾಕ್ ಮಾಡಿದ್ದಕ್ಕೆ ಕುಟುಂಬಸ್ಥರಿಂದ ದೂರವಾಗಿದ್ದಾರೆ.

ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅಂಜುಮ್ ತಮ್ಮ ನೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇಂದು ನನ್ನ ಬಳಿ ಹಣ, ಕಾರು, ಮನೆ ಎಲ್ಲವೂ ಇದೆ. ನನಗೆ ಎಲ್ಲವನ್ನು ನೀಡಿದ ಈ ವೃತ್ತಿಯೇ ನನ್ನನ್ನು ನನ್ನವರಿಂದ ದೂರ ಮಾಡಿದೆ ಎಂದು ಅಂಜುಮ್ ಬೇಸರ ವ್ಯಕ್ತಪಡಿಸುತ್ತಾರೆ.

Anjum Fakih 1

ಮಹಾರಾಷ್ಟ್ರದ ರತ್ನಗಿರಿಯ ಮುಸ್ಲಿಂ ಸಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಅಂಜುಮ್, ಇಂದು ಬಣ್ಣದ ಲೋಕದಿಂದಾಗಿ ಮನೆಯವರಿಂದ ದೂರವಾಗಿದ್ದಾರೆ. ಆರಂಭದಲ್ಲಿ ಅಂಜುಮ್ ಮನೆಯಲ್ಲಿ ಟಿವಿ ಸಹ ಇರಲಿಲ್ಲ. ಮಗಳು 15 ವರ್ಷದವಳಾದಾಗ ತಂದೆ ಮನೆಗೆ ಟಿವಿ ತಂದಿದ್ದಾರೆ. ಇದರಿಂದ ಕೋಪಗೊಂಡ ಅಜ್ಜ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದರಂತೆ. ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಅಂಜುಮ್ ಮುಂದಾದಾಗ ಕುಟುಂಬಸ್ಥರು ವಿರೋಧಿಸಿದ್ದಾರೆ. ವಿರೋಧದ ನಡುವೆಯೂ ಮನೆಯಿಂದ ಹೊರ ಬಂದ ಅಂಜುಮ್ ಆರಂಭದ ದಿನಗಳಲ್ಲಿ ಮುಂಬೈನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು.

Anjum Fakih 2

ತನಗೆ ಮೊದಲ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಸಿಕ್ಕಾಗ ಬಿಕಿನಿ ಧರಿಸಿ ಕ್ಯಾಟ್ ವಾಕ್ ಮಾಡಿದೆ. ಅಂದಿನಿಂದ ಸಂಪೂರ್ಣವಾಗಿ ನಾನು ಕುಟುಂಬದಿಂದ ದೂರವಾಗಿದ್ದೇನೆ. ಈ ಹಿಂದೆ ಇದೇ ಮುಂಬೈನಲ್ಲಿ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದ ನನಗೆ ಬಣ್ಣದ ಲೋಕ ಒಂದು ಗುರುತು ನೀಡಿದೆ. ಜನರು ಇಂದು ನನ್ನನ್ನು ಗುರುತಿಸುತ್ತಿದ್ದಾರೆ ಎಂದು ಅಂಜುಮ್ ಸಂದರ್ಶನದಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *