ಬೆಂಗಳೂರು: ಕಿರುತೆರೆಯ ಖ್ಯಾತ ನಟ ರಕ್ಷ್ ದುಬಾರಿ ಕಾರು ಖರೀದಿಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವೇದಾಂತ್ ಪಾತ್ರದಲ್ಲಿ ನಟಿಸುತ್ತಿರುವ ನಟ ರಕ್ಷ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕಾಗಿ ರಕ್ಷ್ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿಸಿದ್ದಾರೆ. ಈ ಬಗ್ಗೆ ಸ್ವತಃ ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಹೇಳಿಕೊಂಡಿದ್ದಾರೆ.
Advertisement
Advertisement
ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಕಾರಿನ ಫೋಟೋ ಹಾಕಿ ಅದಕ್ಕೆ, “ನಾನು ಕಿರುತೆರೆಯಲ್ಲಿ 10 ವರ್ಷ ದುಡಿದ ಬಳಿಕ ನನ್ನ ಹುಟ್ಟುಹಬ್ಬದಂದು ಈ ದುಬಾರಿ ಕಾರನ್ನು ಖರೀದಿಸಿದ್ದೇನೆ. ಈ ಕಾರನ್ನು ಖರೀದಿಸಲು ನನಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಇದಾಗಿದ್ದು, ದೇಶದಲ್ಲಿ ಇದು ಬಹಳ ಅಪರೂಪ. ಬಿಎಂಟಿಸಿ ಪಾಸ್ ನಿಂದ ಇಲ್ಲಿಯವರೆಗೆ. ನಿಮ್ಮೆಲ್ಲರ ಆಶೀರ್ವಾದಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿ ಇಲ್ಲದಿದ್ದರೆ ಇದನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸ್ವಂತ ಹಣದಲ್ಲಿ ಕಾರು ಖರೀದಿಸುವಲ್ಲಿ ಸಿಗುವ ಖುಷಿ ಎಲ್ಲಿಯೂ ಸಿಗಲ್ಲ” ಎಂದು ಬರೆದುಕೊಂಡಿದ್ದಾರೆ.
Advertisement
ಈ ಪೋಸ್ಟ್ ನಂತರ ರಕ್ಷ್ ಕ್ರೆಡಿಟ್ಸ್ ಕರುನಾಡ ಜನತೆಯ ಆಶೀರ್ವಾದ ಹಾಗೂ ಪ್ರೀತಿ ಎಂದು ಬರೆದಿದ್ದಾರೆ. ಸದ್ಯ ರಕ್ಷ್ ಅವರ ಪೋಸ್ಟ್ ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.