ಬರ್ಲಿನ್: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಪ್ರೀಮಿಯಂ ಚಂದಾದಾರಿಕೆಯನ್ನು ಹೊರ ತರಲು ಸಿದ್ಧವಾಗಿದೆ. ಟೆಲಿಗ್ರಾಂ ತನ್ನ ಪ್ರೀಮಿಯಂ ಅನ್ನು ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ ಎಂದು ಟೆಲಿಗ್ರಾಂ ಸಿಇಒ ಪಾವೆಲ್ ಡುರೋವ್ ಖಚಿತಪಡಿಸಿದ್ದಾರೆ.
ಟೆಲಿಗ್ರಾಂನ ಹೊಸ ಚಂದಾದಾರಿಕೆಯಲ್ಲಿ ಬಳಕೆದಾರರು ಕೆಲವು ಫೀಚರ್‌ಗಳಿಗಾಗಿ ಪಾವತಿ ಮಾಡಬೇಕಾಗುತ್ತದೆ. ಆದರೂ ಸದ್ಯ ಅಸ್ತಿತ್ವದಲ್ಲಿರುವ ಫೀಚರ್‌ಗಳಿಗೆ ಟೆಲಿಗ್ರಾಂ ಶುಲ್ಕ ವಿಧಿಸುವುದಿಲ್ಲ. ಬದಲಾಗಿ ಹೊಸ ಫೀಚರ್‌ಗಳಿಗೆ ಮಾತ್ರವೇ ಶುಲ್ಕ ವಿಧಿಸಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದಿನಿಂದ 3 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ
Advertisement
Advertisement
ಟೆಲಿಗ್ರಾಂ ಪ್ರೀಮಿಯಂ ಅನ್ನು ಆಯ್ಕೆ ಮಾಡುವ ಬಳಕೆದಾರರು ಚಾಟ್‌ಗಳು, ಮೀಡಿಯಾ ಹಾಗೂ ಫೈಲ್ ಅಪ್‌ಲೋಡ್‌ಗಳಿಗೆ ಹೆಚ್ಚಿನ ಮಿತಿಯನ್ನು ಪಡೆಯುತ್ತಾರೆ ಎಂದು ಡುರೊವ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಮೆಜಾನ್‌ನಲ್ಲಿ ಶೂ ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಟ್ರೈಮಾಡಿ
Advertisement
ಮೆಸೇಜಿಂಗ್ ದೈತ್ಯ ಮೆಟಾ ಮಾಲೀಕತ್ವದ ವಾಟ್ಸಪ್‌ಗೆ ಟೆಲಿಗ್ರಾಂ ಪ್ರತಿಸ್ಪರ್ಧಿಯಾಗಿದ್ದು, ಇದು ಪ್ರಸ್ತುತ 50 ಕೋಟಿ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. 2 ವರ್ಷಗಳ ಹಿಂದೆ ವಾಟ್ಸಪ್ ಬಳಕೆದಾರರ ಗೌಪ್ಯತೆ ಬಗ್ಗೆ ಚರ್ಚೆಗೆ ಬಂದಿದ್ದಾಗ ಹೆಚ್ಚಿನ ಜನರು ಟೆಲಿಗ್ರಾಂ ಅಪ್ಲಿಕೇಶನ್ ಕಡೆ ವಾಲಿದ್ದರು. ಟೆಲಿಗ್ರಾಂ ವಿಶ್ವದ ಅತಿ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾದ 10 ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.