ಮುಂಬೈ: ರಿಲಯನ್ಸ್ ಜಿಯೋ ಟೆಲಿಕಾಂ ಪ್ರವೇಶಿಸಿದ ಮೇಲೆ ಭಾರತದಲ್ಲಿದ್ದ ಟೆಲಿಕಾಂ ಕಂಪೆನಿಗಳ ಆದಾಯಕ್ಕೆ ಹೊಡೆತ ಬಿದ್ದಿರುವುದು ಹಳೆಯ ಸುದ್ದಿ. ಈಗ ಈ ಕ್ಷೇತ್ರದಲ್ಲಿ ಆರಂಭವಾಗಿರುವ ಭಾರೀ ಸ್ಪರ್ಧೆಯಿಂದಾಗಿ ಉದ್ಯೋಗಿಗಳ ಉದ್ಯೋಗಕ್ಕೂ ಕುತ್ತು ಬಂದಿದ್ದು, ಒಟ್ಟು 75 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಕೆಲ ಕಂಪೆನಿಗಳು ವಿಲೀನಗೊಳ್ಳುತ್ತಿದ್ದರೆ, ಕೆಲವೊಂದು ಸಂಪೂರ್ಣವಾಗಿ ಮುಚ್ಚುತ್ತಿದೆ. ಇವುಗಳಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿರುವ ಒಟ್ಟು ಅಂದಾಜು 3 ಲಕ್ಷ ಉದ್ಯೋಗಿಗಳ ಪೈಕಿ ಶೇ. 25 ರಷ್ಟು ಮಂದಿ ಉದ್ಯೋಗವನ್ನು ತೊರೆದಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
ಈಗಾಗಲೇ ಕೆಲ ಕಂಪೆನಿಗಳು ಸಂಬಳವನ್ನು ಹೆಚ್ಚಿಸದ ಕಾರಣ ಕೆಲ ಉದ್ಯೋಗಿಗಳು ತೊರೆದಿದ್ದಾರೆ. ಈ ಕ್ಷೇತ್ರವನ್ನು ಬಿಟ್ಟವರಲ್ಲಿ ಶೇ.30ರಷ್ಟು ಮಧ್ಯಮ ಮ್ಯಾನೇಜ್‍ಮೆಂಟ್ ವಿಭಾಗದವರು. ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು ಶೇ.50ರಷ್ಟು ಮಂದಿ ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
Advertisement
ಎಮಾ ಪಾರ್ಟ್ ನರ್ಸ್ ಕಂಪೆನಿಯ ಎ ರಾಮಚಂದ್ರನ್ ಎಂಬವರು ಪ್ರತಿಕ್ರಿಯಿಸಿ, ಒಂದು ವರ್ಷದ ಹಿಂದೆ ಟೆಲಿಕಾಂ ಕ್ಷೆತ್ರದಲ್ಲಿ 3 ಲಕ್ಷ ಮಂದಿ ಉದ್ಯೋಗಿಗಳಿದ್ದರು. ಆದರೆ ಈಗ ಇದರಲ್ಲಿ 25% ಮಂದಿ ಈ ಕ್ಷೇತ್ರವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.
Advertisement
ಹೆಚ್ಚಿನ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ಕಂಪೆನಿಗಳು ಮುಂದುವರೆಸುತ್ತಿದ್ದು, ಕೆಲವರಿಗೆ ಮೊದಲೇ ಪ್ಯಾಕೇಜ್ ನೀಡಿ ತೊರೆಯುವಂತೆ ಹೇಳುತ್ತಿದೆ. ಕಂಪೆನಿಯ ಮಾನವ ಸಂಪನ್ಮೂಲಕ್ಕೆ ಒಟ್ಟು 4% ರಿಂದ 5% ರಷ್ಟು ಖರ್ಚಾಗುತ್ತದೆ. ಈ ಖರ್ಚನ್ನು ಭರಿಸುವ ಸಾಮರ್ಥ್ಯ ಇಲ್ಲದೇ ಇರುವ ಕಾರಣ ಕಂಪೆನಿಗಳು ಉದ್ಯೋಗನ್ನು ಕಡಿತಗೊಳಿಸುತ್ತಿದೆ.
Advertisement
ಟೆಲಿಕಾಂ ಕಂಪೆನಿಯೊಂದರ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಉದ್ಯೋಗಿಗಳಿಂದ ತೆರವಾದ ಜಾಗವನ್ನು ಶೀಘ್ರವೇ ಭರ್ತಿ ಮಾಡುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.
ಟೆಲಿಕಾಂ ಕ್ಷೇತ್ರವನ್ನು ತೊರೆದು ಉದ್ಯೋಗಿಗಳು ಬೇರೆ ಕಡೆ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದು, ಈ ಪ್ರಮಾಣ 35 – 40% ಹೆಚ್ಚಾಗಿದೆ ಎಂದು ಉದ್ಯೋಗಾತ ಸಂಸ್ಥೆಗಳು ತಿಳಿಸಿವೆ.
2016ರ ಸೆಪ್ಟೆಂಬರ್ ನಲ್ಲಿ ಭಾರತದ ಮಾರುಕಟ್ಟೆಯನ್ನು ಜಿಯೋ ಪ್ರವೇಶಿಸಿದ ಬಳಿಕ ದೇಶದ ನಂ 2 ಮತ್ತು ನಂ 3 ಕಂಪೆನಿಗಳಾದ ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ವಿಲೀನಗೊಂಡಿತ್ತು. ಇದಕ್ಕೂ ಮೊದಲು ಏರ್ ಟೆಲ್ ಕಂಪೆನಿ ಟೆಲಿನಾರ್ ಇಂಡಿಯಾ ಕಂಪೆನಿಯನ್ನು ಖರೀದಿಸಿತ್ತು.
ಈಗಾಗಲೇ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ ಈಗಾಗಲೇ ಡಿಸೆಂಬರ್ 1 ರಿಂದ 2ಜಿ ಕರೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಐಡಿಯಾ ಸೆಲ್ಯುಲರ್ ಕಂಪನಿಯು 1,107 ಕೋಟಿ ರೂ. ನಷ್ಟ ಅನುಭವಿಸಿತ್ತು. ಏರ್‍ಟೆಲ್‍ನ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.76ರಷ್ಟು ಕುಸಿದಿದ್ದು 343 ಕೋಟಿ ರೂ. ತಲುಪಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದ್ದು, 2,709 ಕೋಟಿ ರೂ. ನಷ್ಟ ದಾಖಲಾಗಿದೆ.
ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ
ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?
ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ
ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು