ಹೈದರಾಬಾದ್: ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿ ಈಗ ಉಕ್ರೇನ್‍ನಲ್ಲಿ ಸಿಲುಕಿರುವ ಮಗನನ್ನು ರಕ್ಷಣೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಹಿಂದೆ ಕೊರೊನಾ ಲಾಕಾಡೌನ್ ವೇಳೆ ನೆಲ್ಲೂರಿನಲ್ಲಿ ಸಿಲುಕಿದ್ದ ಮಗನಿಗಾಗಿ 1,400 ಕಿ.ಮೀ ಸ್ಕೂಟರ್‍ನಲ್ಲಿ ಸವಾರಿ ಮಾಡಿದ್ದರು. ತೆಲಂಗಾಣದ ಶಿಕ್ಷಕಿ ರಜಿಯಾ ಬೇಗಂ ಇದೀಗ ಮತ್ತೆ ತಮ್ಮ ಮಗನನ್ನು ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Advertisement
Advertisement
ಉಕ್ರೇನ್‍ನಲ್ಲಿ 19 ವರ್ಷದ ಮಗ ನಿಜಾಮುದ್ದೀನ್ ಅಮಾನ್ ಸಿಲುಕಿದ್ದಾನೆ. ಎಂಬಿಬಿಎಸ್ ಓದಲು ಉಕ್ರೇನ್‍ಗೆ ತೆರಳಿದ್ದನು. ನಾನು ತೆಲಂಗಾಣದ ಶಾಲಾ ಶಿಕ್ಷಕಿಯಾಗಿದ್ದೇನೆ. ಮಗನನ್ನು ಭಾರತಕ್ಕೆ ವಾಪಸ್ ಕರೆತರಲು ಸಹಾಯ ಮಾಡಿ ಎಂದು ರಿಜಿಯಾ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು
Advertisement
Advertisement
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಗೃಹ ಸಚಿವ ಮೊಹಮ್ಮದ್ ಅಲಿ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈಶಾನ್ಯ ಉಕ್ರೇನ್‍ನಲ್ಲಿರುವ ಸುಮಿ ನಗರದಲ್ಲಿ ಮಗನಿದ್ದಾನೆ. ಮಗನನ್ನು ಭಾರತಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿ. ನನ್ನ ಮಗನ ಜೊತೆಗೆ ಭಾರತದ ಎಲ್ಲಾ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಎಂದು ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.