ಹೈದರಾಬಾದ್: ಕೇಸರಿ ಉಡುಪು (Saffron Clothing Row) ವಿದ್ಯಾರ್ಥಿಗಳು ಶಾಲೆಗೆ ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಗುಂಪೊಂದು ಮಿಷನರಿ ಶಾಲೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ತೆಲಂಗಾಣದಲ್ಲಿ (Telangana School) ನಡೆದಿದೆ.
ಉತ್ತರ ತೆಲಂಗಾಣ ಜಿಲ್ಲೆಯ ಕನ್ನೆಪಲ್ಲಿ ಗ್ರಾಮದ ಲುಕ್ಸೆಟ್ಟಿಪೇಟ್‌ನ ಸೇಂಟ್ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತಾ ಕೇಸರಿ ವಸ್ತ್ರಧಾರಿಗಳ ಗುಂಪೊಂದು ಶಾಲೆಗೆ ನುಗ್ಗಿ ಎಲ್ಲವನ್ನೂ ಧ್ವಂಸಗೊಳಿಸಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡೇಟಿಗೆ ವಲಸೆ ಕಾರ್ಮಿಕ ಬಲಿ
Advertisement
Advertisement
ಪರೀಕ್ಷೆಗಳು ನಡೆಯುತ್ತಿದ್ದವು. ಪರೀಕ್ಷೆ ಮುಗಿದ ನಂತರ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ, ಸಮವಸ್ತ್ರದಲ್ಲಿ ಬರಬೇಕು. ಕೇಸರಿ ಬಟ್ಟೆ ಧರಿಸಬೇಕಾದರೆ ಅನುಮತಿ ಪಡೆಯಬೇಕು ಎಂದು ಹೇಳಿದ್ದರು. ಇದು ಪೋಷಕರನ್ನು ಪ್ರಚೋದಿಸಿತು. ಈ ಹಿಂದೆಯೂ ಸಹ ಪ್ರಾಂಶುಪಾಲರ ವಿರುದ್ಧ ಕೆಲವು ದೂರುಗಳು ಬಂದಿದ್ದವು ಎಂದು ಮಂಚೇರಿಯಲ್ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಶೋಕ್ ಕುಮಾರ್ ತಿಳಿಸಿದ್ದಾರೆ.
Advertisement
ವಿದ್ಯಾರ್ಥಿಗಳು 14 ದಿನಗಳ ಕಾಲ ‘ಹನುಮಾನ್ ದೀಕ್ಷೆ’ಯನ್ನು ಆಚರಿಸುತ್ತಿದ್ದರು. ವಿದ್ಯಾರ್ಥಿಗಳ ಪೋಷಕರು ಮತ್ತು ಶಾಲಾ ಆಡಳಿತದ ದೂರುಗಳ ಆಧಾರದ ಮೇಲೆ ದಂಡೆಪಲ್ಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪೊಲೀಸರು ವೀಡಿಯೋಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಲಂಡನ್, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ
Advertisement
‘ಹನುಮಾನ್ ಮಾಲಾ ದೀಕ್ಷಾ’ ಉಡುಗೆ ತೊಟ್ಟಿದ್ದಕ್ಕೆ ತನ್ನ ಮಗ ಮತ್ತು 4ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಸಹಪಾಠಿಗಳನ್ನು ಶಾಲೆಗೆ ಬಿಡಲಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಶಾಲೆಯ ಸಿಬ್ಬಂದಿ ಮತ್ತು ಪ್ರಾಂಶುಪಾಲರು ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ. ದ್ವೇಷವನ್ನು ಉತ್ತೇಜಿಸುತ್ತಿದ್ದು, ಧರ್ಮಗಳ ನಡುವೆ ಸಾರ್ವಜನಿಕ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿದೂರು ನೀಡಿರುವ ಶಾಲೆಯ ಆಡಳಿತ ಮಂಡಳಿಯು, ಕೆಲವರು ಶಾಲೆಗೆ ಅತಿಕ್ರಮ ಪ್ರವೇಶ ಮಾಡಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮದರ್ ತೆರೇಸಾ ಅವರ ಪ್ರತಿಮೆ ಮತ್ತು ಗೇಟ್‌ಗಳಿಗೆ ಹಾನಿಯಾಗಿದೆ. ಸುಮಾರು 30,000 ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಆರೋಪಿಸಿದೆ.