ಚಿಕ್ಕಬಳ್ಳಾಪುರ: ನಾಳೆ (ಭಾನುವಾರ) ತೆಲಂಗಾಣ (Telangana Polls) ಸೇರಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಹೈದರಾಬಾದ್‌ಗೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪ್ರಯಾಣ ಬೆಳೆಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10 ಗಂಟೆಯ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಡಿಕೆಶಿ ಹೈದರಾಬಾದ್‌ಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ಜನ ನಮಗೆ ಆಶೀರ್ವಾದ ಮಾಡುವ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಲೋಕಸಭೆಗೆ ಮುನ್ನ ಮೋದಿಗೆ ಅಗ್ನಿಪರೀಕ್ಷೆ; ತೆಲಂಗಾಣ ಆಪರೇಷನ್ ತಪ್ಪಿಸಲು ಕರ್ನಾಟಕ ಕಾಂಗ್ರೆಸ್ ಕವಚ
Advertisement
Advertisement
ನೋಡೋಣ ನಾಳೆ 12 ಗಂಟೆಗೆ ಏನಾಗಬಹುದು? ಎಲ್ಲರೂ ಬಹಳ ಆಶ್ವಾಸನೆಯಲ್ಲಿದ್ದಾರೆ. ಎಲ್ಲರಿಗಿಂತ ಹೆಚ್ಚು ಆಶ್ವಾಸನೆ ನಮಗಿದೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎನ್ನುವ ವಿಶ್ವಾಸವಿದೆ. ನಮ್ಮ ಚುನಾವಣೆಗೂ ಅಕ್ಕಪಕ್ಕದ ರಾಜ್ಯಗಳಿಂದ ಮುನ್ನೂರಕ್ಕೂ ಅಧಿಕ ಜನ ಬಂದು ಕೆಲಸ ಮಾಡಿದ್ದರು. ಅದೇ ರೀತಿ ಅಲ್ಲಿಗೂ ಹೋಗಿ ನಮ್ಮವರು ಕೆಲಸ ಮಾಡ್ತಿದ್ದಾರೆ ಅಷ್ಟೆ ಎಂದು ತಿಳಿಸಿದರು.
Advertisement
ನಮಗೆ ಯಾವ ಆಪರೇಷನ್ ಭೀತಿಯೂ ಇಲ್ಲ, ಯಾವುದೂ ಇಲ್ಲ. ನಾಳೆ ಮಧ್ಯಾಹ್ನದ ವೇಳೆಗೆ ಎಲ್ಲವೂ ಗೊತ್ತಾಗಲಿದೆ ಎಂದು ಡಿಕೆಶಿ ಹೇಳಿದರು. ತೆಲಂಗಾಣದಲ್ಲಿ 2018 ರ ಚುನಾವಣೆಯಲ್ಲಿ ಬಿಆರ್‌ಎಸ್ 88 ಸೀಟ್‌ಗಳನ್ನು ಗೆದ್ದಿತ್ತು. ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತ್ತು. ಇದನ್ನೂ ಓದಿ: ಮಿಜೋರಾಂ ಚುನಾವಣೆ; ಮತ ಎಣಿಕೆ ದಿನಾಂಕ ಮುಂದೂಡಿಕೆ
Advertisement
ಆಂಧ್ರದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯವಾದ ನಂತರ ತೆಲಂಗಾಣದಲ್ಲಿ ಎರಡು ಬಾರಿ ಚುನಾವಣೆ ನಡೆದಿದೆ. ಎರಡು ಬಾರಿಯೂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ. ಈ ಬಾರಿ ಚುನಾವಣೆಯು ಕೆಸಿಆರ್‌ಗೆ ಸುಲಭದ ಹಾರಿಯಾಗಿ ಉಳಿದಿಲ್ಲವೆಂಬ ಸೂಚನೆಯನ್ನು ಸಮೀಕ್ಷೆಗಳು ಹೇಳುತ್ತಿವೆ.