ಹೈದರಾಬಾದ್: ತೆಲಂಗಾಣದ ಯಾದಾದ್ರಿಯಲ್ಲಿ (Yadadri) ಪೊಲೀಸ್ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಡಿಎಸ್ಪಿ (Deputy Superintendent of Police) ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಡಿಎಸ್ಪಿಗಳಾದ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್‌ರನ್ನು ಮೃತರೆಂದು ಗುರುತಿಸಲಾಗಿದೆ. ಎಎಸ್ಪಿ ಪ್ರಸಾದ್ ಮತ್ತು ಹೆಡ್ ಕಾನ್‌ಸ್ಟೇಬಲ್ ನರಸಿಂಗ್ ರಾವ್ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಅಂಗಡಿ ಬಳಿ ಕುಳಿತವನ ಮೇಲೆ ಡೆಡ್ಲಿ ಅಟ್ಯಾಕ್ – ಚಿಕಿತ್ಸೆ ಫಲಿಸದೇ ಯುವಕ ಸಾವು
ಪೊಲೀಸ್ ಅಧಿಕಾರಿಗಳು ಕೆಲಸದ ನಿಮಿತ್ತ ವಿಜಯವಾಡದಿಂದ ಹೈದರಾಬಾದ್‌ಗೆ (Hyderabad) ತೆರಳುತ್ತಿದ್ದ ವೇಳೆ ಯಾದಾದ್ರಿ ಜಿಲ್ಲೆಯ ಖೈತಪುರಂನಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: Rajasthan | ಶಾಲಾ ಮೇಲ್ಛಾವಣಿ ಕುಸಿದು 7 ವಿದ್ಯಾರ್ಥಿಗಳು ಸಾವು – ಐವರು ಶಿಕ್ಷಕರ ಅಮಾನತು
ಚಾಲಕ ಅತಿ ವೇಗದಿಂದ ವಾಹನ ಚಲಾಯಿಸಿದ್ದರಿಂದ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರು ರಸ್ತೆಯ ಇನ್ನೊಂದು ಬದಿಗೆ ಹಾರಿ ಬಿದ್ದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು
ಭೀಕರ ಅಪಘಾತದಲ್ಲಿ ಡಿಎಸ್ಪಿ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ನರಸಿಂಗ್ ರಾವ್ ಮತ್ತು ಎಎಸ್‌ಪಿ ಪ್ರಸಾದ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಜಯವಾಡ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.