ತೆಲಂಗಾಣ: ವ್ಯಕ್ತಿಯೋರ್ವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ದೇವರಂತೆ ಪೂಜಿಸುತ್ತಿದ್ದಾರೆ. ತೆಲಂಗಾಣದ ಜನ್ ಗಾಂವ್ ಜಿಲ್ಲೆಯ ನಿವಾಸಿ ಬುಸ್ಸಾ ಟ್ರಂಪ್ ಫೋಟೋ ಗೆ ಪೂಜೆ ಮಾಡ್ತೀರೋ ವ್ಯಕ್ತಿ.
ಜಿಲ್ಲೆಯ ಕೊನ್ನೆ ಗ್ರಾಮದ 31 ವರ್ಷದ ರೈತ ಬುಸ್ಸಾ ಕೃಷ್ಣಾ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಫೋಟೊವನ್ನು ತಮ್ಮ ಮನೆಯ ಪೂಜಾ ಮಂದಿರದಲ್ಲಿ ಇರಿಸಿಕೊಂಡು ಪೂಜೆ ಮಾಡುತ್ತಿದ್ದಾರೆ. ಪ್ರತಿನಿತ್ಯ ದೇವರಿಗೆ ಪೂಜೆ ಸಲ್ಲಿಸುವಾಗ ಟ್ರಂಪ್ ರಿಗೂ ಸಹ ಪೂಜೆ ಸಲ್ಲಿಸುತ್ತಾರೆ. ಟ್ರಂಪ್ ರ ಭಾವಚಿತ್ರಕ್ಕೆ ಅರಿಶಿಣ, ಕುಂಕುಮ ಹಚ್ಚಿ ಹೂ ಹಾಕಿ ಆರತಿ ಬೆಳಗುತ್ತಾರೆ.
Advertisement
ಪೂಜೆ ಯಾಕೆ?
2017ರ ಫೆಬ್ರವರಿಯಲ್ಲಿ ಅಮೆರಿಕದ ಕನ್ನಾಸ್ ನಲ್ಲಿ ತೆಲಂಗಾಣ ಮೂಲದ ಎಂಜನೀಯರ್ ಶ್ರೀನಿವಾಸ ಕೊಚಿಭೋಟ್ಲ ಎಂಬವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆದ ದ್ವೇಶಾಪರಾಧದ ಕೃತ್ಯ ಇದಾಗಿತ್ತು. ಈ ಪ್ರಕರಣ ಕುರಿತಂತೆ ಟ್ರಂಪ್ ಮೌನವಹಿಸಿದ್ದರು. ಇದರಿಂದ ಭಾರತ ಅಮೆರಿಕಾದೊಂದಿಗೆ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳದಿರಲು ನಿರ್ಧರಿಸಿತ್ತು. ಈ ಕಾರಣಕ್ಕಾಗಿ ಬುಸ್ಸಾ ಕೃಷ್ಣ ಟ್ರಂಪ್ ರ ಭಾವಚಿತ್ರಕ್ಕೆ ಈ ರೀತಿ ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದಾರೆ.
Advertisement
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೃಷ್ಣ ಕೋಚಿಭೋಟ್ಲ ಹತ್ಯೆಯಿಂದ ನನ್ನ ಮನಸ್ಸಿಗೆ ತುಂಬ ನೋವಾಗಿದೆ. ಅಮೆರಿಕಾ ಜನರ ಮೇಲೆ ಭಾರತೀಯರಿಗೆ ಯಾವ ರೀತಿಯ ಪ್ರೀತಿ ಇದೆ ಎಂದು ಅಮೆರಿಕಾ ಜನತೆ ಹಾಗೂ ಟ್ರಂಪ್ ಗೆ ತಿಳಿಸಲು ರೀತಿ ಪೂಜೆ ಮಾಡುತ್ತಿದ್ದೇನೆ. ಇದು ಒಂದು ದಿನ ಟ್ರಂಪ್ ಗೆ ತಲುಪೇ ತಲುಪುತ್ತದೆ ಎಂದು ನನಗೆ ತಿಳಿದಿದದೆ. ಭಾರತೀಯರು ಆಧ್ಯಾತ್ಮಿಕತೆಯಿಂದ ಎಲ್ಲವನ್ನೂ ಗೆಲ್ಲಬಹುದೆಂದು ನಂಬಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಸಾಧ್ಯವಾಗದೇ ಹೋದರೆ ಪ್ರೀತಿಯ ಆರಾಧನೆಯ ಮೂಲಕ ಅವರನ್ನು ಗೆಲ್ಲಬಹುದು. ನಾನಿಲ್ಲಿ ಮಾಡುತ್ತಿರುವುದು ಅದನ್ನೇ ಎಂದು ಹೇಳಿದ್ದಾರೆ.
Advertisement
ಇನ್ನು ಈ ಪೂಜೆ ಕುರಿತಂತೆ ಕೃಷ್ಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೊಗಳನ್ನು ಅಪ್‍ಲೋಡ್ ಮಾಡುತ್ತಿದ್ದಾರೆ. ಆದರೆ ಕೆಲವರು ನನ್ನನ್ನು ಹುಚ್ಚ ಎಂದು ತಿಳಿದಿರಬಹುದು. ಇಲ್ಲಿ ಸಲ್ಲಿಸಿದ ಪೂಜೆ ಅಲ್ಲಿ ಹೇಗೆ ಸಲ್ಲುತ್ತದೆ ಎಂದು ನನಗೆ ನಂಬಿಕೆ ಇದೆ. ಒಂದು ವೇಳೆ ಟ್ರಂಪ್ ಭಾರತಕ್ಕೆ ಬಂದರೆ ನನ್ನನ್ನು ಖಂಡಿತವಾಗಿ ಗುರುತು ಹಿಡಿಯುತ್ತಾರೆ ಎಂದು ಕೃಷ್ಣ ಹೇಳಿದ್ದಾರೆ.