ರಾಯಚೂರು: ತೆಲಂಗಾಣದಲ್ಲಿ (Telangana) ರಾಜ್ಯದ ಭತ್ತಕ್ಕೆ (Paddy) ಏಕಾಏಕಿ ನಿರ್ಬಂಧ ಹೇರಿರುವ ಹಿನ್ನಲೆ ರಾಯಚೂರಿನ (Raichur) ಗಡಿಯಲ್ಲಿ ರೈತರು (Farmers) ಹೋರಾಟ ನಡೆಸಿದ್ದಾರೆ. ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ಕಲಬುರಗಿ (Kalaburagi) ವಿಭಾಗೀಯ ಎಪಿಎಂಸಿ ಅಧಿಕಾರಿ ರಾಜೇಶ್ವರಿ ತೆಲಂಗಾಣದ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ರೈತರಿಗೆ (Farmers) ಭತ್ತ ಮಾರಾಟಕ್ಕೆ ಯಾವುದೇ ನಿರ್ಬಂಧ ಇರಬಾರದು. ರೈತರ ವ್ಯವಹಾರ ಸುಗಮವಾಗಿ ನಡೆಯಬೇಕು. ರಾಯಚೂರಿನ ಎಲ್ಲಾ ಮಿಲ್ ನಲ್ಲೂ ತೆಲಂಗಾಣದ ಭತ್ತ ಬರುತ್ತದೆ. ರಾಯಚೂರಿನಲ್ಲಿ ತೆಲಂಗಾಣ, ಆಂಧ್ರಪ್ರದೇಶದ ಭತ್ತಕ್ಕೆ ಯಾವುದೇ ನಿರ್ಬಂಧವಿಲ್ಲ. ತೆಲಂಗಾಣದ ಅಡಿಷನಲ್ ಡೈರೆಕ್ಟರ್ ಜೊತೆ ಮಾತನಾಡಿದ್ದೇನೆ. ಯಾವುದೇ ಆದೇಶ ಮಾಡಿಲ್ಲ ಎಂದಿದ್ದಾರೆ. ಆದರೆ ಅಲ್ಲಿನ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆದೇಶ ಹಿನ್ನೆಲೆ ನಿರ್ಬಂಧ ಹೇರುತ್ತಿದ್ದಾರೆ ಎಂದರು. ಇದನ್ನೂ ಓದಿ: ಅಕ್ರಮವಾಗಿ ನೆಲೆಸಿದ್ದ 24 ಮಂದಿ ಪಾಕ್, 159 ಮಂದಿ ಬಾಂಗ್ಲಾ ಪ್ರಜೆಗಳು ವಶಕ್ಕೆ – ಸರ್ಕಾರ ಅಂಕಿ-ಅಂಶ ಬಿಡುಗಡೆ
Advertisement
Advertisement
ನಾನು ನಮ್ಮ ಡೈರೆಕ್ಟರೇಟ್ ಗಮನಕ್ಕೆ ತಂದಿದ್ದು ತುರ್ತಾಗಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಮೌಖಿಕವಾಗಿ ವರದಿ ನೀಡಿದ್ದೇನೆ. ಈಗಲೇ ವರದಿ ಸಲ್ಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ತೆಲಂಗಾಣದ ರೈತರಿಗೆ ನಾವು ನಿರ್ಬಂಧ ಹಾಕಿಲ್ಲ. ಎಂಎಸ್‌ಪಿ ಮಾರಾಟ ಮಾಡುವಾಗಲು ರೈತರು ಎನ್ನುವುದನ್ನು ದೃಢೀಕರಿಸಿ ಮಾಡಿ ಅವಕಾಶ ಕೊಡುತ್ತೇವೆ. ರೈತರ ಭತ್ತ ಮಾರಾಟ ಸುಗಮವಾಗಿ ನಡೆಯಬೇಕು. ಅದಕ್ಕೆ ಕ್ರಮ ವಹಿಸುತ್ತೇವೆ ಎಂದು ಎಪಿಎಂಸಿ ವಿಭಾಗೀಯ ಅಧಿಕಾರಿ ರಾಜೇಶ್ವರಿ ರೈತರಿಗೆ ಭರವಸೆ ನೀಡಿದ್ದಾರೆ.
Advertisement
ರಾಜ್ಯದ ರೈತರ ಭತ್ತ ಮಾರಾಟಕ್ಕೆ ತೆಲಂಗಾಣದಲ್ಲಿ ಏಕಾಏಕಿ ನಿರ್ಬಂಧ ಹೇರಿರುವುದನ್ನ ಖಂಡಿಸಿ ರಾಯಚೂರಿನ ದೇವಸುಗೂರು ಬಳಿ ರಾಜ್ಯದ ಗಡಿಯಲ್ಲಿ ಅಂತರರಾಜ್ಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು.
Advertisement
ಈಗ ತೆಲಂಗಾಣದಲ್ಲಿ ಉತ್ತಮ ಬೆಲೆ ಇರುವುದರಿಂದ ಭತ್ತ ಮಾರಾಟಕ್ಕೆ ಮುಂದಾಗಿರುವ ರಾಜ್ಯದ ರೈತರಿಗೆ ತೊಂದರೆಯಾಗಿದೆ. ಕ್ವಿಂಟಾಲ್‌ಗೆ 2,500 ರೂ. ಹಾಗೂ 500 ಪ್ರೋತ್ಸಾಹ ಧನ ನೀಡುತ್ತಿರುವ ತೆಲಂಗಾಣ ಸರ್ಕಾರ ಕರ್ನಾಟಕ ರೈತರು ಸೌಲಭ್ಯ ಪಡೆಯಬಾರದು ಅಂತ ನಿರ್ಬಂಧ ಹೇರಿದ್ದಾರೆ. ಆದ್ರೆ ಖರೀದಿ ಕೇಂದ್ರಗಳಲ್ಲಿ ನಾವು ಮಾರಾಟ ಮಾಡುವುದಿಲ್ಲ. ಮುಕ್ತ ಮಾರುಕಟ್ಟೆ ಮಾರಲು ಅವಕಾಶ ಕೊಡಿ ಅಂತ ರಾಜ್ಯದ ರೈತರು ಆಗ್ರಹಿಸಿದ್ದಾರೆ. ಹೆದ್ದಾರಿ ಬಂದ್ ಹಿನ್ನೆಲೆ ಭತ್ತ ತುಂಬಿದ ಲಾರಿ, ಟ್ರ್ಯಾಕ್ಟರ್ ,ಇತರ ವಾಹನಗಳು ಕಿಲೋಮೀಟರ್ ಗಟ್ಟಲೇ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.