ಹೈದರಾಬಾದ್: ತೆಲಂಗಾಣದ ಗೃಹ ಸಚಿವ ಮಹಮೂದ್ ಅಲಿ (Mahmood Ali) ಯವರು ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ ಎಂದು ಹೇಳಿದ್ದಾರೆ.
ಹೈದರಾಬಾದ್ (Hyderabad) ನ ಸಂತೋಷ್ ನಗರದಲ್ಲಿರುವ ಕೆವಿ ರಂಗಾರೆಡ್ಡಿ ಕಾಲೇಜಿ (Women’s Degree College in Santosh Nagar) ನಲ್ಲಿ ವಿದ್ಯಾರ್ಥಿನಿಯರನ್ನು ಬುರ್ಕಾ ತೆಗೆದಿರಿಸಿ ಪರೀಕ್ಷೆ ಬರೆಯಲಾಗಿತ್ತು. ಈ ವಿಚಾರ ಅಲ್ಲಿ ಭಾರೀ ಚರ್ಚೆಗೀಡಾಗಿತ್ತು. ಈ ಸಂಬಂಧ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಗೃಹ ಸಚಿವರು ಕೂಡ ಪ್ರತಿಕ್ರಿಯಿಸಿ, ಮಹಿಳೆಯರು ಸಾಧ್ಯವಾದಷ್ಟು ದೇಹವನ್ನು ಮುಚ್ಚಿಕೊಂಡು ಬರಬೇಕು. ಮಹಿಳೆಯರು ಧರಿಸುವ (Women Dress) ಸಣ್ಣ ಸಣ್ಣ ಉಡುಪುಗಳಿಂದ ಮಾತ್ರ ಸಮಸ್ಯೆಯಾಗುತ್ತದೆ ಎಂದಿದ್ದಾರೆ.
Advertisement
Advertisement
ನಮ್ಮದು ಸಂಪೂರ್ಣ ಜಾತ್ಯಾತೀತ ನೀತಿಯಾಗಿದೆ. ಪ್ರತಿಯೊಬ್ಬರಿಗೂ ಯಾವ ಬಟ್ಟೆ ಬೇಕಾದರೂ ಧರಿಸುವ ಹಕ್ಕಿದೆ. ಆದರೆ ಹಿಂದೂ ಅಥವಾ ಇಸ್ಲಾಮಿಕ್ ಪದ್ಧತಿಗಳ ಪ್ರಕಾರವೇ ಬಟ್ಟೆ ತೊಡಬೇಕು. ಯುರೋಪಿಯನ್ ಸಂಸ್ಕೃತಿಯನ್ನು ಅನುಸರಿಸಬಾರದು. ನಾವು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಗೌರವಿಸಬೇಕು. ವಿಶೇಷವಾಗಿ ಮಹಿಳೆಯರು ಸಣ್ಣ ಉಡುಪುಗಳನ್ನು ಧರಿಸಬಾರದು ಮತ್ತು ಅವರು ಸಾಧ್ಯವಾದಷ್ಟು ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕು ಎಂದು ಹೇಳಿದರು.
Advertisement
Advertisement
ಕಾಲೇಜಿನಲ್ಲಿ ನಡೆದಿದ್ದೇನು..?: ರಂಗಾ ರೆಡ್ಡಿ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಉರ್ದು ಮಾಧ್ಯಮ ಪದವಿ ಪರೀಕ್ಷೆ ನಡೆಯುವುದಿತ್ತು. ಹೀಗಾಗಿ ಬುರ್ಕಾ ತೆಗೆದು ಪರೀಕ್ಷಾ ಕೊಠಡಿ ತೆರಳುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿತ್ತು. ಆದರೆ ವಿದ್ಯಾರ್ಥಿನಿಯರು ಮಾತ್ರ ಬುರ್ಕಾ ಹಾಕಿಕೊಂಡೇ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದರು. ಈ ಹಿನ್ನೆಲಯ್ಲಲಿ ಸುಮಾರು ಅರ್ಧ ಗಂಟೆ ಕಾಲ ಅವರನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ನಿಲ್ಲಿಸಲಾಗಿತ್ತು. ಕೊನೆಗೆ ಬುರ್ಕಾ (Burqa) ತೆಗೆದೇ ಪರೀಕ್ಷೆ ಬರೆದಿರುವುದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬುರ್ಕಾ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ನಮ್ಮ ಪೋಷಕರು ಗೃಹ ಸಚಿವ ಮಹಮೂದ್ ಅಲಿ ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.