– ಸಿನಿಮಾ ತಾರೆಯರು ಹಣ ಸಂಪಾದನೆಗಾಗಿಯೇ ಇದ್ದಾರೆ
– ನಾನು ಯಾರ ಅಭಿಮಾನಿಯೂ ಅಲ್ಲ, ನನಗೆ ನಾನೇ ಸ್ಟಾರ್
ಅಮರಾವತಿ: ಪುಷ್ಪ 2 (Pushpa 2) ಸಿನಿಮಾ ನಟ ಅಲ್ಲು ಅರ್ಜುನ್ (Allu Arjun) ಬಂಧನ ವಿಚಾರದಲ್ಲಿ ಪೊಲೀಸರ ನಡೆಯನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಸಮರ್ಥಿಸಿಕೊಂಡಿದ್ದಾರೆ.
Advertisement
ಅಲ್ಲು ಅರ್ಜುನ್ ಸುಮ್ಮನೆ ಸಿನಿಮಾ ನೋಡಿ ಹೊರ ಬಂದಿಲ್ಲ. ಅವರು ತಮ್ಮ ಕಾರಿನ ಸನ್‌ರೂಫ್‌ನಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿದರು. ಚಲನಚಿತ್ರದ ಸಂಭ್ರಮಾಚರಣೆ ಮಾಡುತ್ತಿದ್ದ ಅಭಿಮಾನಿಗಳನ್ನು ಹುರಿದುಂಬಿಸಿದರು. ಇದರಿಂದ ಪರಿಸ್ಥಿತಿ ಹತೋಟಿ ತಪ್ಪಿತು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾನು ಕಾನೂನು ಪಾಲಿಸುವ ನಾಗರಿಕ.. ತನಿಖೆಗೆ ಸಹಕರಿಸುತ್ತೇನೆ: ಜೈಲಿಂದ ರಿಲೀಸ್ ಆದ ಅಲ್ಲು ಅರ್ಜುನ್ ರಿಯಾಕ್ಷನ್
Advertisement
Advertisement
ನಟನ ಬಂಧನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಲ್ತುಳಿತಕ್ಕೆ ಒಳಗಾದ ಸಂತ್ರಸ್ತೆ ಮತ್ತು ಅವರ ಕುಟುಂಬದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಬಡ ಕುಟುಂಬವೊಂದು ಸದಸ್ಯನನ್ನು ಕಳೆದುಕೊಂಡಿದೆ. ಮೃತ ಮಹಿಳೆಯ ಮಗ ಇನ್ನೂ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾನೆ. ಅವನು ಕೋಮಾದಿಂದ ಹೊರಬಂದು ತನ್ನ ತಾಯಿಯಿಲ್ಲದ ಜೀವನವನ್ನು ನಡೆಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಸಿನಿಮಾ ತಾರೆಯರು ಹಣ ಸಂಪಾದನೆಗಾಗಿಯೇ ಇದ್ದಾರೆ. ಜನಸಾಮಾನ್ಯರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್ ಜೈಲಿಂದ ರಿಲೀಸ್ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್
ನಿಮ್ಮ ನೆಚ್ಚಿನ ತೆಲುಗು ನಟ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಿಎಂ, ನಾನೇ ಸ್ಟಾರ್. ನಾನು ಯಾರ ಅಭಿಮಾನಿಯೂ ಅಲ್ಲ ಎಂದು ಹೇಳಿದ್ದಾರೆ.