– ಶೋಧ ಕಾರ್ಯಕ್ಕೆ ಖುದ್ದು ಅಗ್ನಿಶಾಮಕ ದಳದೊಂದಿಗೆ ಕೆರೆಗಿಳಿದ ಶಾಸಕ
ತುಮಕೂರು: ಸಾಪ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬರು ಕುಣಿಗಲ್ (Kunigal) ಪಟ್ಟಣದ ದೊಡ್ಡಕೆರೆಗೆ (Doddakere Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಣಿಗಲ್ ತಾಲೂಕು ಸೊಬಗನಹಳ್ಳಿ (Sobaganahalli) ಗ್ರಾಮದ ನಿವಾಸಿ ಸುಮಾ (26) ಮೃತ ಟೆಕ್ಕಿ.
- Advertisement
- Advertisement
ಸುಮಾ ಶಿವರಾತ್ರಿ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಗುರುವಾರ ಬೆಂಗಳೂರಿಗೆ ವಾಪಸ್ ಆಗುವ ವೇಳೆ ಬಸ್ಸಿನಲ್ಲಿ ಯಾರದ್ದೋ ಜೊತೆ ಫೋನಿನಲ್ಲಿ ಮಾತನಾಡುತ್ತಾ ಜಗಳ ಮಾಡಿಕೊಂಡಿದ್ದಾರೆ. ಜಗಳ ಮಾಡುತ್ತಲೇ ಕುಣಿಗಲ್ ಬಸ್ ನಿಲ್ದಾಣದಿಂದ ದೊಡ್ಡಕೆರೆ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೆಬಿ ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ನೇಮಕ
ಕೆರೆ ಏರಿ ಮೇಲೆ ಸುಮಾಳ ಮೊಬೈಲ್, ಪರ್ಸ್ ಸಿಕ್ಕಿದ್ದರಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಶವ ಪತ್ತೆಯಾಗದ ಕಾರಣ ಮಲ್ಪೆಯಿಂದ ಈಜು ತಜ್ಞರನ್ನು ಕರೆಸಿ ಶೋಧಿಸಿದ ಬಳಿಕ ಶವಪತ್ತೆಯಾಗಿದೆ.
ಶೋಧ ಕಾರ್ಯಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್ ಸಾಥ್ ನೀಡಿದ್ದು, ಅಗ್ನಿಶಾಮಕ ದಳದೊಂದಿಗೆ ಲೈಫ್ ಜಾಕೆಟ್ ಧರಿಸಿ ಕೆರೆಗೆ ಇಳಿದ ಶಾಸಕ ರಂಗನಾಥ್ ಯುವತಿಗಾಗಿ ಶೋಧಕಾರ್ಯ ನಡೆಸಿದರು. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್
ಸದ್ಯ ಮೃತದೇಹವನ್ನು ಕುಣಿಗಲ್ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ