ಬೀದರ್: ಜೆಡಿಎಸ್‍ನಲ್ಲಿ (JDS) ಟಿಕೆಟ್ ಹಂಚುವುದು ಬಹಳ ಸುಲಭ. ದೇವೇಗೌಡ್ರು (H.D.Deve Gowda) ಅಡುಗೆ ಮನೆಯಲ್ಲಿ ಕುಳಿತುಕೊಂಡು ಚರ್ಚಿಸಿದರೆ ಅರ್ಧ ಗಂಟೆಯಲ್ಲಿ ಎಲ್ಲಾ ಮುಗಿದು ಹೋಗುತ್ತದೆ ಎಂದು ಜೆಡಿಎಸ್ ವಿರುದ್ಧ ಬಿಜೆಪಿ (BJP) ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಬೀದರ್‌ನಲ್ಲಿ (Bidar) ಲೇವಡಿ ಮಾಡಿದ್ದಾರೆ.
ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್‍ನಲ್ಲಿ ಸೊಸೆಗೆ ಟಿಕೆಟ್ ಕೊಡಬೇಕಾ, ಮಗನಿಗೆ ಕೊಡಬೇಕಾ? ಮಗಳಿಗೆ ಕೊಡಬೇಕಾ ಅಥವಾ ಅಳಿಯನಿಗೆ ಕೊಡಬೇಕಾ ಎಂದು ಅಡುಗೆ ಮಾಡತ್ತಾ ಮಾಡತ್ತಾ ಟಿಕೆಟ್ ಹಂಚಿಕೆ ಮುಗಿದು ಹೋಗುತ್ತದೆ. ಆದರೂ ಹಾಸನ ಟಿಕೆಟ್ ಹಂಚಿಕೆ ಇನ್ನೂ ಮುಗಿಯುತ್ತಿಲ್ಲ. ಹಾಸನದಲ್ಲಿ ಸೊಸೆಗೆ ಕೊಡಬೇಕೋ, ಇಲ್ಲಾ ಮಗನಿಗೆ ಕೊಡಬೇಕಾ ಎಂಬ ಗಲಾಟೆ ಇನ್ನೂ ತಣ್ಣಗಾಗಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹಿಂದೂಗಳ ಭಾವನೆಗೆ ಧಕ್ಕೆ ಆರೋಪ: ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಜೆಡಿಎಸ್ ದೂರು
Advertisement
Advertisement
ಕಾಂಗ್ರೆಸ್‍ನಲ್ಲಿ ಎರಡು, ಮೂರು ಬಣಗಳು ಕುಳಿತು ಟಿಕೆಟ್ ಫೈನಲ್ ಮಾಡುತ್ತವೆ. ಈ ರೀತಿ ಬೇಕಾದವರಿಗೆ ಟಿಕೆಟ್ ಕೊಟ್ಟು ಇಂದು ರಸ್ತೆ ರಸ್ತೆಯಲ್ಲಿ ಬಂಡಾಯ ಅಭ್ಯರ್ಥಿಗಳು ಹೊಡೆದಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಮನೆಯಲ್ಲಿ ಕುಳಿತುಕೊಂಡು ಟಿಕೆಟ್ ಫೈನಲ್ ಮಾಡುವ ಸಂಪ್ರದಾಯ ಇಲ್ಲ. ರಾಜ್ಯ ಹಾಗೂ ಕೇಂದ್ರದ ನಾಯಕರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ಟಿಕೆಟ್ ಕೊಡತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ನಟ ಸುದೀಪ್ (Sudeep) ಬಿಜೆಪಿ ಬೆಂಬಲ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ಬೆಂಬಲ ನೀಡಿದ್ದಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನವರು ಅವರನ್ನು ವಿಲನ್ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಆಗ ಅವರು ಬಹಳ ಸಜ್ಜನ ಹಾಗೂ ಒಳ್ಳೆಯ ವ್ಯಕ್ತಿಯಾಗಿದ್ದರು. ಮೋದಿ (Narendra Modi) ಹಾಗೂ ಬೊಮ್ಮಾಯಿ (Basavaraj Bommai) ಸಂಬಂಧದಿಂದ ಪಕ್ಷಕ್ಕೆ ಬೆಂಬಲ ನೀಡಿದರೆ ಒಳ್ಳೆಯ ವ್ಯಕ್ತಿ ಅಲ್ಲ. ಅವರ ಸಿನಿಮಾ ಬ್ಯಾನ್ ಮಾಡಬೇಕು. ಸುದೀಪ್ ಇಡಿ, ಸಿಬಿಐನ ಭಯದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗುಜರಾತ್ ನಾಯಕರನ್ನು ಮೆಚ್ಚಿಸಲು KMF ಮುಗಿಸುವ ಹುನ್ನಾರ: ಹೆಚ್ಡಿಕೆ ವಾಗ್ದಾಳಿ