ಬೆಂಗಳೂರು: ಸದ್ಯ ಸೋಮವಾರದಿಂದ ಮೆಟ್ರೋ ದರ (Metro Ticket Price) ಏರಿಕೆ ಇಲ್ಲ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಸ್ಪಷ್ಟಪಡಿಸಿದ್ದಾರೆ.
ಮೆಟ್ರೋ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮರು ಪರಿಶೀಲನೆ ಮಾಡಿ ದರ ಪರಿಷ್ಕರಣೆ ಮಾಡೋದಕ್ಕೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಮನವಿ ಮಾಡಲಾಗಿತ್ತು. ಮನವಿ ಮೇರೆಗೆ ದರ ಏರಿಕೆ ತಡೆ ಹಿಡಿದಿರೋ ಬಗ್ಗೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಹೊಸದಾಗಿ ದರ ನಿಗದಿ ಸಮಿತಿ ರಚನೆ ಮಾಡಿ ದರ ಪರಿಷ್ಕರಣೆಗೆ ಮನವಿ ಮಾಡಲಾಗಿತ್ತು. ಸದ್ಯ ಸೋಮವಾರದಿಂದ ದರ ಏರಿಕೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ʻನಮ್ಮ ಮೆಟ್ರೋʼ ಬಲು ದುಬಾರಿ; ಟಿಕೆಟ್ ದರ ವಿಚಾರದಲ್ಲೂ ರಾಜ್ಯ-ಕೇಂದ್ರದ ಸಂಘರ್ಷ
ಈ ಹಿಂದೆ ದರ ಏರಿಕೆಯಲ್ಲೇ ಹಲವು ನ್ಯೂನತೆಗಳು ಇದ್ದವು. ಆ ಬಗ್ಗೆ ಕೇಂದ್ರ ಸಚಿವ ಖಟ್ಟರ್‌ರಲ್ಲಿ ಮನವಿ ಮಾಡಿದ್ದೇವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನ ಸಲ್ಲಿಕೆ ಮಾಡಲಾಗಿದೆ. ಈಗ ಹೊಸದಾಗಿ ದರ ನಿಗದಿ ಸಮಿತಿ ರಚನೆ ಆಗಿ ಪರಿಶೀಲನೆ ಆಗಲಿದೆ. ರಾಜ್ಯ ಸರ್ಕಾರ ಹೊಸದಾಗಿ ದರ ನಿಗದಿ ಸಮಿತಿ ರಚನೆ ಮಾಡಬೇಕಿದೆ. ದರ ನಿಗದಿ ಸಮಿತಿ ರಚನೆ ಮಾಡೋದು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಹಾಕಬಾರದು. ಮತ್ತೆ ದರ ಪರಿಷ್ಕರಣೆ ಬಗ್ಗೆ ಹೋರಾಟ ಮಾಡಬೇಕಿದೆ, ಹೋರಾಟ ಮಾಡ್ತೀವಿ. ಕೇಂದ್ರ ಸರ್ಕಾರಣ ರಾಜ್ಯ ಸರ್ಕಾರ ಅಂತಾ ಅನ್ನೋದೆ ಹೋರಾಟ ಮಾಡ್ತೀವಿ ಎಂದು ಎಚ್ಚರಿಸಿದ್ದಾರೆ.

