ಚಿಕ್ಕಮಗಳೂರು: ತೇಜಸ್ವಿ ಸೂರ್ಯ (Tejasvi Surya) ವಿಮಾನದ ತುರ್ತು (Plane Door) ನಿರ್ಗಮನದ ಡೋರ್ ಓಪನ್ ಮಾಡಿಲ್ಲ. ಅದನ್ನ ರೊಟೇಟ್ ಮಾಡಿ ಓಪನ್ ಮಾಡ್ಬೇಕು. ಅವರು ಸಂಸದರು, ಬುದ್ಧಿವಂತರು, ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರು ಡೋರ್ ಓಪನ್ ಮಾಡಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ನಡೆಯನ್ನು ತಮಿಳುನಾಡು ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ಸಮರ್ಥಿಸಿಕೊಂಡಿದ್ದಾರೆ.
ಚಿಕ್ಕಮಗಳೂರು (Chikkamagaluru) ಉತ್ಸವದ ಹಿನ್ನೆಲೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ, ಅವರು ಡೋರ್ ಓಪನ್ ಮಾಡಿಲ್ಲ. ಅದನ್ನ ರೊಟೇಟ್ ಮಾಡಿ ಓಪನ್ ಮಾಡ್ಬೇಕು ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬಜೆಟ್ ಅಧಿವೇಶನ ನಂತರ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಸ್.ಆರ್ ಶ್ರೀನಿವಾಸ್
Advertisement
Advertisement
ಅವರು ಕೂತಿದ್ದು ಎಮರ್ಜೆನ್ಸಿ ಎಕ್ಸಿಟ್ ಸೀಟಿನಲ್ಲಿ. ಎಟಿಆರ್ ಫ್ಲೈಟ್ ಸೀಟಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ. ಅಲ್ಲಿ ಎಕ್ಸಿಟ್ ಡೋರ್‌ನಲ್ಲಿ ಬೀಡಿಂಗ್ ಸ್ವಲ್ಪ ಓಪನ್ ಇತ್ತು. ಅದನ್ನ ಏರ್ ಹಾಸ್ಟೆಸ್ ಗಮನಕ್ಕೆ ತಂದರು. ಪೈಲೆಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದ್ರು. ಅಲ್ಲಿ ತೇಜಸ್ವಿ ಇನ್ಸಿಡೆಂಟ್ ರಿಪೋರ್ಟ್ ಕೊಟ್ಟಿದ್ದಾರೆ ಎಂದರು.
Advertisement
Advertisement
ತೇಜಸ್ವಿ ಸೂರ್ಯ ಡೋರ್‌ನ ಪುಲ್ ಮಾಡಿಲ್ಲ. ಫ್ಲೈಟ್ ಹೊರಟಿದ್ದು ತಡವಾಗಿದ್ದಕ್ಕೆ ಇತರೆ ಪ್ರಯಾಣಿಕರಿಗೆ ಕ್ಷಮೆ ಕೇಳಿದ್ದಾರೆ. ಇಂಡಿಗೋ ಅವರೇ ಕ್ಲಾರಿಫಿಕೇಶನ್ ಮಾಡಿ, ಇನ್ಸಿಡೆಂಟ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್‌ಗೆ ಮಾತನಾಡಲು ಬೇರೆ ವಿಷಯ ಇಲ್ಲ. ಹಾಗಾಗಿ ಇಂತಹ ವಿಷಯವನ್ನ ಇಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಣ್ಣಾಮಲೈ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಗೇ ಪ್ರಧಾನಿಯೇ ಬಂಡವಾಳ, ಮೋದಿ ತೋರಿಸಿ ಮತ ಕೇಳ್ತಿದ್ದಾರೆ: ಸಿದ್ದರಾಮಯ್ಯ ಕಿಡಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k