ಮುಂಬೈ: ವೈಫೈ ಹಾಟ್‍ಸ್ಪಾಟ್ (Wi-Fi hotspot) ಪಾಸ್‍ವರ್ಡ್ (Password) ಹಂಚಿಕೊಳ್ಳದಕ್ಕೆ ಇಬ್ಬರು ವ್ಯಕ್ತಿಗಳು ಸೇರಿ ಯುವಕನನ್ನು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ನಡೆದಿದೆ.
ಮುಂಬೈನ ಕಮೋಥೆ ಪ್ರದೇಶದ ಪಾನ್ ಶಾಪ್ ಬಳಿ ಈ ಘಟನೆ ನಡೆದಿದೆ. ವಿಶಾಲ್ ರಾಜ್‍ಕುಮಾರ್ ಮೌರ್ಯ (17) ಮೃತ ಯುವಕ ಹಾಗೂ ರವೀಂದ್ರ ಹಾಗೂ ಸಂತೋಷ್ ಬಂಧಿತರು. ವಿಶಾಲ್ ಬಳಿ ರವೀಂದ್ರ ಹಾಗೂ ಸಂತೋಷ್ ಇಬ್ಬರು ಬಂದು ನಿನ್ನ ಮೊಬೈಲ್ ಹಾಟ್‍ಸ್ಪಾಟ್ ಆನ್ ಮಾಡಿ ಪಾಸ್‍ವರ್ಡ್ ನೀಡು ಎಂದು ಕೇಳಿದ್ದಾರೆ. ಇದಕ್ಕೆ ವಿಶಾಲ್ ನಿರಾಕರಿಸಿದ್ದಾನೆ.
Advertisement
Advertisement
ಈ ಹಿನ್ನೆಲೆಯಲ್ಲಿ ಆ ರವೀಂದ್ರ ಹಾಗೂ ಸಂತೋಷ್ ಇಬ್ಬರು ಸೇರಿ ವಿಶಾಲ್‍ನನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ನಡುವಿನ ವಾಗ್ವಾದ ನಡೆದಿದ್ದು, ಅದು ಹೊಡೆದಾಡಿದುಕೊಳ್ಳುವ ಮಟ್ಟಕ್ಕೆ ತಿರುಗಿದೆ. ಆ ವೇಳೆ ಸಂತೋಷ್ ಹಾಗೂ ರವೀಂದ್ರ ಸೇರಿ ವಿಶಾಲ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಅವರಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಪಾವತಿಸಿ: ಎಲೋನ್ ಮಸ್ಕ್
Advertisement
Advertisement
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ರವೀಂದ್ರ ಅತ್ವಾಲ್ ಅಕಾ ಹರ್ಯಾನಿವಿ ಮತ್ತು ಸಂತೋಷ್ ವಾಲ್ಮೀಕಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್