ಲಕ್ನೋ: 14 ವರ್ಷದ ಬಾಲಕನೊಬ್ಬ ಕಾಳಿ ಮಾತೆಯ ಅವತಾರವನ್ನು ಅನುಕರಿಸಲು ಹೋಗಿ ನೇಣು ಬಿಗಿದುಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶ ರಾಜಧಾನಿಯಾದ ಲಕ್ನೋದಲ್ಲಿ ನಡೆದಿದೆ.
ಚಿತ್ರರಂಜನ್ ಮೃತ ದುರ್ದೈವಿ. ಈತ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ರಾತ್ರಿ ತನ್ನ 9 ವರ್ಷದ ತಂಗಿ ಗುಂಜಾನ್ ಮತ್ತು ನೆರೆಹೊರೆಯವರ ಜೊತೆ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುವ `ಮಹಾ ಕಾಳಿ’ ಧಾರಾವಾಹಿಯನ್ನ ನೋಡಿ ನಾನು ಕಾಳಿ ಅವತಾರ ತೋರಿಸುತ್ತೇನೆ ಎಂದು ಹೇಳಿದ್ದಾನೆ.
Advertisement
Advertisement
ಅದೇ ರೀತಿ ಚಿತ್ರರಂಜನ್ ಒಂದು ದುಪ್ಪಟ್ಟ ತೆಗೆದುಕೊಂಡು ಬಾಗಿಲ ಬಳಿ ಹಾಕಿ ಕುತ್ತಿಗೆ ಸುತ್ತಾ ಬಿಗಿಯಾಗಿ ಸುತ್ತಿಕೊಂಡಿದ್ದಾನೆ. ಆದರೆ ದುರದೃಷ್ಟವಶಾತ್ ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ತಕ್ಷಣ ಮಕ್ಕಳು ಭಯದಿಂದ ಕೂಗಲು ಆರಂಭಿಸಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಪೋಷಕರು ಓಡಿ ಬಂದು ಮಗನನ್ನು ಕೂಡಲೇ ಕೆಳಗಿಳಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ.
Advertisement
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಆಗ ಮಕ್ಕಳು ಮಹಾಕಾಳಿ ಧಾರಾವಾಹಿಯಲ್ಲಿ ಬರುವ ಕಾಳಿ ಮಾತೆಯನ್ನು ನೋಡಿ ಕಾಳಿಯ ರೀತಿ ನಾನು ನಾಲಿಗೆಯನ್ನು ಹೊರ ಬರಿಸಿ ತೋರಿಸುತ್ತೇನೆ ಅಂತಾ ಹೇಳಿದ್ದ ಎಂದು ತಿಳಿಸಿದ್ದಾರೆ.
Advertisement
ಈ ಹಿಂದೆಯೂ ಧಾರಾವಾಹಿಯನ್ನು ನೋಡಿ ಬಾಲಕ ಕೆಲವು ಬಾರಿ ಇದೇ ರೀತಿ ಮಾಡಲು ಹೋಗಿದ್ದ. ಆದರೆ ಈತನ ತಾಯಿ ಆಗ ಬೈದು ಈ ರೀತಿ ಮಾಡಬಾರದು. ದೇವಿಗೆ ಕೋಪ ಬರುತ್ತದೆ ಎಂದು ಹೇಳಿದ್ದರು. ಆದರೆ ತಾಯಿ ಮನೆ ಕೆಲಸ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಈ ಸಂದರ್ಭದಲ್ಲಿ ಎರಡನೇ ಬಾರಿ ಕಾಳಿಯ ಅವತಾರವನ್ನು ಅನುಕರಿಸಲು ಪ್ರಯತ್ನಿಸಿದ್ದಾನೆ. ಆದರೆ ದುರದೃಷ್ಟವಶಾತ್ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ.
ಸದ್ಯಕ್ಕೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನು ಓದಿ: ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!