ದಾವಣಗೆರೆ: ಖಾಸಗಿ ವಾಹಿನಿಯಲ್ಲಿನ ಧಾರಾವಾಹಿ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚೈತ್ರಾ ಮತ್ತು ಮಂಜುನಾಥ ದಂಪತಿಯ ಮಗಳು ಪ್ರಾರ್ಥನಾ (7) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹರಿಹರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನವೆಂಬರ್ 11 ರಂದು ಈ ಘಟನೆ ನಡೆದಿದೆ.
Advertisement
ಸೆಂಟ್ ಮೇರಿಸ್ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಪ್ರಾರ್ಥನಾ ಪ್ರತಿದಿನ ಮಧ್ಯಾಹ್ನ ಮರುಪ್ರಸಾರ ಆಗುತ್ತಿದ್ದ ನಂದಿನಿ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಳು. ನವೆಂಬರ್ 11 ಶನಿವಾರ ಮನೆಗೆ ಬಂದವಳೇ ಧಾರಾವಾಹಿ ವೀಕ್ಷಿಸಿದ್ದಾಳೆ. ಈ ಧಾರಾವಾಹಿ ನಾಯಕಿ ಪೇಪರ್ ಹಚ್ಚಿಕೊಂಡು ಕುಣಿಯುವುದನ್ನು ನೋಡಿದ್ದಾಳೆ. ನಾಯಕಿ ಕುಣಿಯುವುದನ್ನು ನೋಡಿ ಪ್ರಾರ್ಥನಾ ಬೆಂಕಿ ಹಂಚಿಕೊಂಡಿದ್ದಾಳೆ.
Advertisement
Advertisement
ಮನೆಯಲ್ಲಿ ದೊಡ್ಡವರು ಇರಲಿಲ್ಲ:
ಪ್ರಾರ್ಥನಾ ಪೋಷಕರು ಕೆಲಸಕ್ಕೆ ಹೋಗುತ್ತಿದ್ದು, ಅಜ್ಜಿ ಪ್ರಾರ್ಥನಾಳನ್ನು ಪ್ರತಿದಿನ ಶಾಲೆಯಿಂದ ಮನೆಗೆ ಕರೆತರುತ್ತಿದ್ದರು. ಆಕೆಯನ್ನು ಮನೆಗೆ ತಂದು ಬಿಟ್ಟು ಟಿವಿ ಆನ್ ಮಾಡಿ ಹೊರಗಡೆ ಹೋಗಿದ್ದಾರೆ. ಈ ವೇಳೆ ಪ್ರಾರ್ಥನಾ ಬೆಂಕಿ ಹಚ್ಚಿಕೊಂಡಿದ್ದಾಳೆ.
Advertisement
ಗೊತ್ತಾಗಿದ್ದು ಹೇಗೆ?
ಬೆಂಕಿ ಹಚ್ಚಿಕೊಂಡು ವಿಲವಿಲನೇ ಒದ್ದಾಡುವುದನ್ನು ಮನೆಯಲ್ಲೇ ಇದ್ದ ಪ್ರಾರ್ಥನಾ ತಂಗಿ ಮತ್ತು ತಮ್ಮ ನೋಡಿದ್ದಾರೆ. ಕೂಡಲೇ ಅವರು ಅಲ್ಲೇ ಹತ್ತಿರದಲ್ಲಿದ್ದ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಈ ವಿಚಾರ ತಿಳಿದು ಅಜ್ಜಿಯು ಮನೆಗೆ ಧಾವಿಸಿ ನಂತರ ಎಲ್ಲರೂ ಸೇರಿ ಆಕೆಯನ್ನು ತಾಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ಪರಿಸ್ಥಿತಿ ಗಂಭೀರವಾಗಿರುವುದನ್ನು ನೋಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ನಂತರ ಪ್ರಾರ್ಥನಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರಾರ್ಥನಾ ನವೆಂಬರ್ 12ರಂದು ಮೃತಪಟ್ಟಿದ್ದಾಳೆ.
ತಡವಾಗಿ ಬೆಳಕಿಗೆ ಬಂದಿದ್ದು ಹೇಗೆ?
7 ವರ್ಷದ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಪೋಷಕರು ಹಲವು ದಿನಗಳಿಂದ ನೋವಿನಲ್ಲೇ ಇದ್ದರು. ಆದರೆ ಇನ್ನು ಮುಂದೆ ಯಾರಿಗೂ ಈ ರೀತಿ ಆಗದೇ ಇರಲಿ. ಅಷ್ಟೇ ಅಲ್ಲದೇ ಪೋಷಕರಿಗೂ ಈ ವಿಚಾರ ತಿಳಿಯಬೇಕು ಎನ್ನುವ ದೃಷ್ಟಿಯಿಂದ ಪ್ರಾರ್ಥನಾ ಪೋಷಕರೇ ಮಾಧ್ಯಮಗಳಿಗೆ ಈ ಸುದ್ದಿಯನ್ನು ಬುಧವಾರ ತಿಳಿಸಿದ್ದಾರೆ.
https://youtu.be/ukbXoVNhqR8