ಲಕ್ನೋ: ಎಲ್ಇಡಿ ಟಿವಿ (LED TV) ಸ್ಫೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ನಲ್ಲಿ (Ghaziabad) ನಡೆದಿದೆ.
ಓಮೇಂದ್ರ (16) ಮೃತ ಬಾಲಕ. ಈತ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತ್ತಿದ್ದ. ಆ ವೇಳೆ ಎಲ್ಇಡಿ ಟಿವಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಓಮೇಂದ್ರ (16)ನ ಮುಖ, ಎದೆ ಮತ್ತು ಕತ್ತಿನ ಮೇಲೆ ತೀವ್ರವಾಗಿ ಗಾಯವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿದೇ ಸಾವನ್ನಪ್ಪಿದ್ದಾನೆ.
ಘಟನೆ ಸಂಭವಿಸಿದಾಗ ಓಮೇಂದ್ರನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಇನ್ನೊಂದು ಕೋಣೆಯಲ್ಲಿದ್ದರು. ಇದರಿಂದಾಗಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ. ಅವರೆಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಗೋಡೆಯ (Wall) ಒಂಧು ಭಾಗ ಕುಸಿದಿದ್ದು, ಕೆಲಕಾಲ ನೆರೆಹೊರೆಯವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದನ್ನೂ ಓದಿ: ದೇವಸ್ಥಾನದೊಳಗೆ ಐಟಮ್ ಸಾಂಗ್ಗೆ ಡ್ಯಾನ್ಸ್ – ಯುವತಿ ವಿರುದ್ಧ FIR
ಸಿಲೆಂಡರ್ ಸ್ಫೋಟಗೊಂಡಿದೆ ಎಂದು ನಾನು ಭಾವಿಸಿದೆ. ಇದರಿಂದಾಗಿ ಎಲ್ಲರೂ ಓಡಿಬಂದೆವು ಎಂದು ನೆರೆಮನೆಯಾತ ತಿಳಿಸಿದ್ದಾನೆ. ಇದನ್ನೂ ಓದಿ: ನವರಾತ್ರಿಯಂದು ಕಲ್ಲುತೂರಾಟ – ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು