ಡಬ್ಲಿನ್: 14 ವರ್ಷದ ಬಾಲಕನೊಬ್ಬ ವಿಡಿಯೋ ಗೇಮ್ ಆಡಿ ತನಗೆ ಗೊತ್ತಿಲ್ಲದೆ ಅಮ್ಮನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನ ಖಾಲಿ ಮಾಡಿರೋ ಘಟನೆ ಐರ್ಲೆಂಡಿನಲ್ಲಿ ನಡೆದಿದೆ.
ಇಲ್ಲಿನ ಕಾರ್ಕ್ ನಿವಾಸಿಯಾದ ಮಹಿಳೆ ಹಣ ವಿತ್‍ಡ್ರಾ ಮಾಡಲು ಹೋದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿ ಶಾಕ್ ಆಗಿದ್ದರು. ತನ್ನ ಇಡೀ ಸಂಬಳ ಹಾಗೂ ಕ್ರಿಸ್‍ಮಸ್‍ಗಾಗಿ ನೀಡಲಾಗಿದ್ದ ಬೋನಸ್ ಹಣವೆಲ್ಲಾ ಖರ್ಚಾಗಿತ್ತು.
Advertisement
ಮಹಿಳೆ ಮಗನಿಗಾಗಿ ತನ್ನ ಡೆಬಿಟ್ ಕಾರ್ಡ್ ಬಳಸಿ ಪ್ಲೇಸ್ಟೇಷನ್ ನ ಫೀಫಾ 18 ಗೇಮ್ ಖರೀದಿಸಿದ್ದರು. ಗೇಮ್ ಆಡುವಾಗ ಬಾಲಕ ಪರ್ಚೇಸಿಂಗ್ ಪಾಯಿಂಟ್ಸ್ ಖರೀದಿಸಿದ್ದು, ಇದಕ್ಕೆ ಹಣ ಕಟ್ ಆಗುತ್ತದೆ ಎಂಬುದು ಆತನಿಗೆ ತಿಳಿದಿರಲಿಲ್ಲ.
Advertisement
Advertisement
ಆತನಿಗೆ ಇದು ಅರ್ಥವಾಗಿರಲಿಲ್ಲ. ಪ್ರತಿ 10 ಪಾಯಿಂಟ್‍ಗೆ ಹೆಚ್ಚಿನ ಹಣ ಕಟ್ ಆಗ್ತಿತ್ತು. ಗೇಮ್ ಖರೀದಿ ಮಾಡುವಾಗ ಅಥವಾ ಆಡುವಾಗ ಇದರಲ್ಲಿ ಹಣ ಕಡಿತವಾಗೋ ಅಂಶ ಇರುತ್ತದೆ ಎಂದು ಅವರು ಹೇಳಲ್ಲ. ನನ್ನ ಕಾರ್ಡ್ ಆ್ಯಕ್ಟಿವೇಟ್ ಮಾಡಲು ಆತ ಏನೂ ಮಾಡಬೇಕಿರಲಿಲ್ಲ ಅಥವಾ ಏನನ್ನೂ ಕ್ಲಿಕ್ ಮಾಡಬೇಕಿರಲಿಲ್ಲ. ಅದಾಗಲೇ ಕಾರ್ಡ್ ರೆಜಿಸ್ಟರ್ ಆಗಿದ್ದರಿಂದ ಅದರ ವಿವರ ಹಾಕುವ ಅಗತ್ಯವಿರಲಿಲ್ಲ. ಆತ ಗೇಮ್ ಆಡುವಾಗ ನನ್ನ ಖಾತೆಯಿಂದ ಹಣ ಕಡಿತಗೊಳ್ಳುತ್ತಿದೆ ಎಂದು ಗೊತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.
Advertisement
ನಾನು ಪ್ಲೇಸ್ಟೇಷನ್ ಸಂಪರ್ಕ ಮಾಡಿದಾಗ ಇದು ವಯಸ್ಕರ ಗೇಮ್ ಎಂದು ಹೇಳಿದ್ರು. ನನ್ನ ಮಗ 14 ವರ್ಷದವನು. ಆತನಿಗೆ ತಾನು ಹಣದೊಂದಿಗೆ ಆಟವಾಡ್ತಿದ್ದೇನೆಂದು ಅರ್ಥವಾಗಿರಲಿಲ್ಲ ಎಂದು ವಿವರಿಸಿದೆ ಎಂದು ಆಕೆ ಹೇಳಿದ್ದಾರೆ. ಆದರೂ ಪ್ಲೇಸ್ಟೇಷನ್ ಹಿಂದಿರೋ ಸೋನಿ ಸಂಸ್ಥೆ, ಗೇಮ್‍ಗಾಗಿ ಖರ್ಚು ಮಾಡಲಾಗಿರೋ ಹಣವನ್ನ ಹಿಂದಿರುಗಿಸಲು ನಿರಾಕರಿಸಿದೆ.
ಇದರಿಂದ ಮಹಿಳೆಯ ಮಗ ಕೂಡ ಪಶ್ಚಾತ್ತಾಪ ಪಡುತ್ತಿದ್ದು, ಮನೆಯಿಂದ ಹೊರಹೋಗಿಲ್ಲ ಎಂದು ವರದಿಯಾಗಿದೆ.