ನವದೆಹಲಿ: ತಂತ್ರಜ್ಞಾನ ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಬೆಳಗ್ಗೆ ಗಾಂಧಿನಗರದ ಲಾವಡ್ ಪ್ರದೇಶದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದರು. ಭದ್ರತಾ ಪಡೆಗಳನ್ನು ಶ್ಲಾಘಿಸಿದರು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು.
Advertisement
At 11 AM, I will be at the Rashtriya Raksha University, where I am honoured to be delivering the Convocation address. A building in the university will also be dedicated to the nation.
— Narendra Modi (@narendramodi) March 12, 2022
Advertisement
ದೇಶದ ಭದ್ರತೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ಒತ್ತಿ ಹೇಳಿದ ಅವರು, ತಂತ್ರಜ್ಞಾನವು ಈಗ ಭದ್ರತಾ ವ್ಯವಸ್ಥೆಯಲ್ಲಿ ಸಂಭಾವ್ಯ ಅಸ್ತ್ರವಾಗಿದೆ. ಭದ್ರತಾ ಪಡೆಗಳಲ್ಲಿರಲು ಕೇವಲ ದೈಹಿಕ ತರಬೇತಿ ಸಾಕಾಗುವುದಿಲ್ಲ. ಈಗ ವಿಶೇಷ ಸಾಮಥ್ರ್ಯವುಳ್ಳ ಹಾಗೂ ದೈಹಿಕವಾಗಿ ಸದೃಢರಾಗದಿದ್ದರೂ ಸಹ ಭದ್ರತೆಗೆ ಕೊಡುಗೆ ನೀಡಬಹುದು ಎಂದರು. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ
Advertisement
जीवन का कोई क्षेत्र ऐसा नहीं है, जहां हमारी बेटियां प्रभावी भूमिका में न हों। सुरक्षा के क्षेत्र में भी अगर बेटियों की भागीदारी बढ़ेगी, तो देश की माताओं-बहनों के लिए सुरक्षा का एहसास और बढ़ेगा। pic.twitter.com/eXggeXkVIH
— Narendra Modi (@narendramodi) March 12, 2022
Advertisement
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಾವು ನೋಡಿದ್ದೇವೆ. ಲಾಕ್‍ಡೌನ್ ಸಮಯದಲ್ಲಿ ಸಮವಸ್ತ್ರದಲ್ಲಿ ಅನೇಕ ಪೊಲೀಸರು ಅಗತ್ಯವಿರುವವರಿಗೆ ಆಹಾರ ಮತ್ತು ಔಷಧಿಗಳನ್ನು ನೀಡಿದರು. ಜನರು ಪೊಲೀಸರ ಮಾನವೀಯ ಮುಖವನ್ನು ನೋಡಿದ್ದಾರೆ ಎಂದು ಹೇಳಿದರು.
ಪೊಲೀಸರ ಬಗ್ಗೆ ಜನರಲ್ಲಿರುವ ಗ್ರಹಿಕೆಯನ್ನು ಬದಲಾಯಿಸುವ ರೀತಿಯಲ್ಲಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಬೇಕು. ಪೊಲೀಸ್ ಬಗ್ಗೆ ಜನರಲ್ಲಿ ಒಂದು ಕೆಟ್ಟ ಗ್ರಹಿಕೆ ಇದೆ. ಜನರೊಂದಿಗೆ ಸೌಹಾರ್ದಯುತವಾಗಿರುವ ರೀತಿಯಲ್ಲಿ ಪೊಲೀಸ್ ಪಡೆಯನ್ನು ತರಬೇತುಗೊಳಿಸುವುದು ಕಡ್ಡಾಯವಾಗಿದೆ ಎಂದು ಸಲಹೆ ನೀಡಿದರು. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ
ಭದ್ರತಾ ಪಡೆಗಳಲ್ಲಿನ ನೇಮಕಾತಿಯಲ್ಲಿನ ಸುಧಾರಣೆಗಳ ಅಗತ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯದ ನಂತರ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ನೇಮಕಾತಿಯಲ್ಲಿ ಸುಧಾರಣೆಗಳ ಅಗತ್ಯವಿತ್ತು. ದುರದೃಷ್ಟವಶಾತ್ ನಾವು ಹಿಂದುಳಿದಿದ್ದೇವೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ ಎರಡು ದಿನಗಳ ಗುಜರಾತ್ ಭೇಟಿ ಶುಕ್ರವಾರ ಪ್ರಾರಂಭವಾಯಿತು. ಅಲ್ಲಿ ಅವರು ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿ ಕಮಲಂವರೆಗೆ ರೋಡ್‍ಶೋ ನಡೆಸಿದರು. ನಂತರ ಅಹಮದಾಬಾದ್‍ನಲ್ಲಿ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು. ಇದಲ್ಲದೆ ಅಹಮದಾಬಾದ್‍ನ ಜಿಎಂಡಿಸಿ ಮೈದಾನದಲ್ಲಿ ಮಹಾ ಪಂಚಾಯತ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಅವರ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿ ಮಾಡಿ ಅವರ ಜೊತೆ ಕುಳಿತು ಭೋಜನ ಸ್ವೀಕರಿಸಿದರು.