ನವದೆಹಲಿ: ತಾಂತ್ರಿಕ ಕಾರಣಗಳಿಂದ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಐಆರ್‌ಸಿಟಿಸಿ (IRCTC) ಹೇಳಿದೆ. ಸಮಸ್ಯೆ ಬಗೆಹರಿಯುವವರೆಗೂ ಮೇಕ್‌ಮೈಟ್ರಿಪ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಅದು ಹೇಳಿದೆ.
ನಮ್ಮ ತಾಂತ್ರಿಕ ತಂಡ ಸಮಸ್ಯೆಯನ್ನು ಇತ್ಯರ್ಥಪಡಿಸುವ ಕೆಲಸ ಆರಂಭಿಸಿದ್ದು, ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಲಾಗವುದು ಎಂದು ಟ್ವೀಟ್ ಮಾಡಿ ಐಆರ್‌ಸಿಟಿಸಿ ತಿಳಿಸಿದೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಚಿಂತನೆ
Advertisement
Advertisement
IRCTC ವೆಬ್ ಪೋರ್ಟಲ್ ಮತ್ತು ಅಪ್ಲಿಕೇಶನ್‌ನಲ್ಲಿನ ಸೇವೆಗಳು ಬೆಳಿಗ್ಗೆ 8 ರಿಂದ ಸ್ಥಗಿತಗೊಂಡಿವೆ. ಟಿಕೆಟ್ ಬುಕ್ಕಿಂಗ್ ಸ್ವೀಕಾರವಾಗದಿದ್ದರೂ, ಹಲವಾರು ಜನರು ತಮ್ಮ ಹಣವನ್ನು ಬೆಳಿಗ್ಗೆ 10 ಗಂಟೆಯವರೆಗೆ ಕಳೆದುಕೊಂಡೊದ್ದಾರೆ ಎಂದು ದೂರಿದರು.
Advertisement
Advertisement
ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ ಜನರಿಗೆ ಭಾರತೀಯ ರೈಲ್ವೆ ಹಣವನ್ನು ಹಿಂದಿರುಗಿಸುತ್ತದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದೆ. ಸತತ ಮೂರು ಗಂಟೆಗಳ ನಂತರ ಸಮಸ್ಯೆಯನ್ನು ಬಗೆಹರಿಸಲಾಯಿತು. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುತ್ತಲೇ 5,000 ರೂ. ಲಂಚವನ್ನು ಜಗಿದು ನುಂಗಿದ ಕಂದಾಯ ಅಧಿಕಾರಿ
Web Stories