ವಾಷಿಂಗ್ಟನ್: ವಿಮಾನ ನಿರ್ವಹಣಾ ಸಾಫ್ಟ್‌ವೇರ್‌ನ ತಾಂತ್ರಿಕ ಸಮಸ್ಯೆಯಿಂದಾಗಿ (Technical Issues) ಅಮೆರಿಕದಾದ್ಯಂತ (America) ವಿಮಾನ (Flight) ಸಂಚಾರ ಅಸ್ತವ್ಯಸ್ತಗೊಂಡಿದೆ. ತಾಂತ್ರಿಕ ದೋಷ ಬಹುತೇಕ ವಿಮಾನಗಳ ಮೇಲೆ ಪರಿಣಾಮ ಬಿದ್ದಿದ್ದು, ಅವುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ತಾಂತ್ರಿಕ ಸಮಸ್ಯೆ ಕಂಡುಬರುತ್ತಲೇ ಅಮೆರಿಕದಲ್ಲಿ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಬುಧವಾರ ಸ್ಥಳೀಯ ಕಾಲಮಾನ ಮುಂಜಾನೆ 6:30ರ ವೇಳೆಗೆ ಸುಮಾರು 760 ವಿಮಾನಗಳು ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪೈಲಟ್ ಹಾಗೂ ಇರತ ಸಿಬ್ಬಂದಿಗೆ ತಾಂತ್ರಿಕ ದೋಷದ ಬಗ್ಗೆ ಅಥವಾ ವಿಮಾನ ನಿಲ್ದಾಣ ಸೌಲಭ್ಯ ಸೇವೆಗಳಲ್ಲಿ ಯಾವುದೇ ಬದಲಾವಣೆಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡುವಂತೆ ಮಾಹಿತಿ ನೀಡಿಲ್ಲ ಎಂದಿದೆ.
The FAA is working to restore its Notice to Air Missions System. We are performing final validation checks and reloading the system now.
Operations across the National Airspace System are affected.
We will provide frequent updates as we make progress.
— The FAA ✈️ (@FAANews) January 11, 2023
ನಾಗರಿಕ ವಿಮಾನಯಾನ ನಿಯಂತ್ರಣ ಈ ಬಗ್ಗೆ ತನ್ನ ವಿಮಾನ ಕಾರ್ಯಾಚರಣೆಗಳಿಗೆ ಸೂಚನೆ (NOTAM) ನೀಡುವ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸಲಹೆಯೊಂದರಲ್ಲಿ ತಿಳಿಸಿದೆ. ದೋಷ ಯಾವಾಗ ಸರಿಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಇದನ್ನೂ ಓದಿ: ಕುಡಿದ ನಶೆಯಲ್ಲಿ ವಿಮಾನ ನಿಲ್ದಾಣದಲ್ಲೇ ವ್ಯಕ್ತಿ ಬಹಿರಂಗ ಮೂತ್ರ ವಿಸರ್ಜನೆ
ಅಮೆರಿಕದಾದ್ಯಂತ ವಿಮಾನಗಳ ವಿಳಂಬ ಹಾಗೂ ನಿಲುಗಡೆಯಾಗಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯಾಣಿಕರು ತಿಳಿಸಿದ್ದಾರೆ. ಟೆಕ್ಸಾಸ್‌ನಿಂದ ಪೆನ್ಸಿಲ್ವೇನಿಯಾದ ವಿಮಾನ ನಿಲ್ದಾಣಗಳಲ್ಲಿ ಈ ತಾಂತ್ರಿಕ ದೋಷ ಹೆಚ್ಚಿನ ಪರಿಣಾಮ ಬೀರಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜೋಶಿಮಠ ಮುಳುಗಡೆ – ಪ್ರತಿ ಸಂತ್ರಸ್ತ ಕುಟುಂಬಕ್ಕೆ 1.5 ಲಕ್ಷ ಪರಿಹಾರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k