ಚಿಕ್ಕಬಳ್ಳಾಪುರ: ಲಂಡನ್‌ಗೆ ಹೊರಟಿದ್ದ ವರ್ಜಿನ್ ಅಟ್ಲಾಂಟಿಕ ಏರ್‌ಲೈನ್ಸ್ (Virgin Atlantic Flight) ವಿಮಾನದಲ್ಲಿ ತಾಂತ್ರಿಕ ದೋಷ (Technical Glitch) ಕಾಣಿಸಿಕೊಂಡಿದೆ.
ಬೆಂಗಳೂರು (Bengaluru) ಏರ್‌ಪೋರ್ಟ್‌ನಿಂದ ಟೇಕ್ ಆಫ್ ಆಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ತುಮಕೂರು ಬಳಿ ಆಗಸದಲ್ಲಿ ವಿಮಾನ ರೌಂಡ್ಸ್ ಹೊಡೆದು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿ ತುರ್ತು ಭೂಸ್ಪರ್ಶ ಮಾಡಿದೆ. ಇದನ್ನೂ ಓದಿ: ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ಅಸ್ವಸ್ಥ – ಮಸ್ಕತ್‌ನಲ್ಲಿ ತುರ್ತು ಭೂಸ್ಪರ್ಶ
ಸೆ.6ರ ಬೆಳಗ್ಗೆ 8:20ಕ್ಕೆ 270 ಜನ ಪ್ರಯಾಣಿಕರನ್ನ ಹೊತ್ತು ಕೆಐಎಬಿಯಿಂದ (ಕೆಂಪೇಗೌಡ ವಿಮಾನ ನಿಲ್ದಾಣ) ವಿಮಾನ ಟೇಕ್ ಆಫ್ ಆಗಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅರ್ಧಗಂಟೆಗೂ ಅಧಿಕ ಕಾಲ ವಿಮಾನ ಗಿರಕಿ ಹೊಡೆದಿದೆ. ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದ್ದು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನ ನಿಲ್ದಾಣದ ತಾಂತ್ರಿಕ ಸಿಬ್ಬಂದಿ ವಿಮಾನವನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಯಡವಟ್ಟು – ಶ್ರೀನಗರ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್ ಕಂಬಕ್ಕೆ ಇಂಡಿಗೋ ವಿಮಾನ ಡಿಕ್ಕಿ
