– 41 ಮಂದಿ ಪ್ರಯಾಣಿಕರು ಸೇಫ್
ಬೆಳಗಾವಿ: ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನದಲ್ಲಿ (Star Air Flight) ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ವಿಮಾನವನ್ನ ಬೆಳಗಾವಿ ಏರ್‌ಪೋರ್ಟ್‌ನಲ್ಲೇ (Belagavi Airport) ತುರ್ತು ಭೂಸ್ಪರ್ಶ ಮಾಡಲಾಗಿದೆ.
ಸ್ಟಾರ್ ಏರ್‌ನ S5111 ಸಂಖ್ಯೆಯ ವಿಮಾನದ ಇಂಜಿನ್‌ನಲ್ಲಿ ದೋಷ (Technical Error) ಕಂಡುಬಂದ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ: 2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?
ವಿಮಾನದಲ್ಲಿ ಅಜಯ್ ಸುತಾರ್, ವೈಷ್ಣವ್ ಶಾನಭಾಗ, ನಾರಾಯಣ ಡೆಲ್ ಸೇರಿದಂತೆ ಸುಮಾರು 41 ಮಂದಿ ಪ್ರಯಾಣಿಕರಿದ್ದರು. ವಿಮಾನ ಟೇಕಾಫ್ ಆಗುತ್ತಿದ್ದಂತೆ ತಾಂತ್ರಿಕ ದೋಷವಿರುವುದು ಗೊತ್ತಾಗಿದೆ. ಎಚ್ಚೆತ್ತ ಪೈಲಟ್ ಕೂಡಲೇ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಇದನ್ನೂ ಓದಿ: UER-II ದ್ವಾರಕಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ಮೋದಿ
ಒಟ್ಟಿನಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.ಇದನ್ನೂ ಓದಿ: ಬಂಧನದಲ್ಲಿದ್ದ ಬಾಂಗ್ಲಾದ ಗರ್ಭಿಣಿ ಮುಂಬೈನ ಜೆಜೆ ಆಸ್ಪತ್ರೆಯಿಂದ ಎಸ್ಕೇಪ್