ದಾವಣಗೆರೆ: ಏಷ್ಯಾದಲ್ಲೇ 2ನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಡೆದಿರುವ ಜಿಲ್ಲೆಯ ಸೂಳೆಕೆರೆ (ಶಾಂತಿಸಾಗರ) ರಕ್ಷಣೆಗೆ ದಾವಣಗೆರೆಯ ಕೆಲ ಸಾಫ್ಟ್‍ವೇರ್ ಉದ್ಯೋಗಿಗಳು ಕೆರೆ ಉಳಿಸಿ ಅಭಿಯಾನ ಆರಂಭಿಸಿದ್ದಾರೆ.
ದೇಶದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರೂ ಸಹ 2,500 ಎಕೆರೆ ವಿಸ್ತೀರ್ಣವಿರುವ ಕೆರೆಯ ಸುಮಾರು ಒಂದೂವರೆ ಸಾವಿರ ಎಕರೆ ಒತ್ತುವರಿಯಾಗಿದೆ ಎನ್ನುವ ಆರೋಪ ಕೇಳಿಬರುತ್ತಿವೆ. ಅಲ್ಲದೇ ಈ ಕೆರೆ ಹೂಳು ತುಂಬಿದ್ದು, ನೀರು ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾಗದ ರೈತರ ಜೀವನಾಡಿಯಾಗಿರುವ ಸೂಳೆಕೆರೆಯನ್ನು ಉಳಿಸಲು ಸಾಫ್ಟ್‍ವೇರ್ ಉದ್ಯೋಗಿಗಳು ಹೋರಾಟ ಆರಂಭಿಸಿದ್ದಾರೆ.
Advertisement
Advertisement
ಪ್ರಮುಖವಾಗಿ ಸಾವಿರಾರು ಎಕೆರೆ ಬೆಳೆ ಪ್ರದೇಶಕ್ಕೆ ಈ ಕೆರೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಕೆಲ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪ್ರದೇಶ ರೈತರ ಹಾಗೂ ಜನರ ಕುಡಿಯುವ ನೀರಿನ ಮೂಲವಾಗಿರುವ ಕೆರೆಯ ಬಗ್ಗೆ ಜಾಗೃತಿ ಮೂಡಿಸಿ ಈ ಮೂಲಕ ಕೆರೆಯ ರಕ್ಷಣೆಗೆ ಟೆಕ್ಕಿಗಳು ಮುಂದಾಗಿರುವುದು ಉತ್ತಮ ಬೆಳಣಿಗೆಯಾಗಿದೆ. ಅಲ್ಲದೇ ತಮ್ಮ ಈ ಕಾರ್ಯಕ್ಕೆ ಎಲ್ಲರು ಸಹಕಾರ ನೀಡಬೇಕೆಂಬುದು ಹೋರಾಟಗಾರರು ಮನವಿ ಮಾಡಿದ್ದಾರೆ.