ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಟೆಕ್ಕಿಯೊಬ್ಬ ಸರಿಯಾದ ಚಿಕಿತ್ಸೆ ಸಿಗದೇ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವರ್ತೂರಿನ 35 ವರ್ಷದ ಆನಂದ್ ಮೃತ ಟೆಕ್ಕಿ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ನಿನ್ನೆ ರಾತ್ರಿ 10:45 ಕ್ಕೆ ಅಪಘಾತ ನಡೆದಿತ್ತು. ಅಪಘಾತವಾಗಿ ರಸ್ತೆಯಲ್ಲಿ ಟೆಕ್ಕಿ ರಸ್ತೆಯಲ್ಲಿ ಬಿದ್ದಿದ್ದರು. ಗಾಯಾಳುವನ್ನ ಆಸ್ಪತ್ರೆಗೆ ಸೇರಿಸಲು ಅಂಬುಲೆನ್ಸ್‌ಗೆ ಸಾರ್ವಜನಿಕರು ಕರೆ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಟೆಕ್ಕಿಯನ್ನು ಅಂಬುಲೆನ್ಸ್‌ಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ರೇಲ್ವೆ ಕೆಳಸೇತುವೆ ಮೂಲಕ ಅಂಬುಲೆನ್ಸ್ ಪಾಸಾಗದೆ ಪರದಾಟ ನಡೆಸಿತ್ತು.
ಜಕ್ಕೂರು ಏರೋ ಡ್ರಮ್ ರಾಷ್ಟ್ರೀಯ ಹೆದ್ದಾರಿಯಿಂದ ನ್ಯಾಯಾಂಗ ಬಡಾವಣೆಗೆ ಸಂಪರ್ಕಿಸುವ ರೇಲ್ವೆ ಕೆಳಸೇತುವೆ ಬಳಿ ಗಾಯಾಳುವನ್ನು ಕಾರಿಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಟೆಕ್ಕಿ ಮೃತಪಟ್ಟಿದ್ದಾರೆ. ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

