ಬೆಂಗಳೂರು: ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಾರತ್ತಹಳ್ಳಿ ಪೊಲೀಸರು ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆರೋಪಿಗಳಿಗಾಗಿ ಉತ್ತರ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.
ಟೆಕ್ಕಿ ಅತುಲ್ (Techie Atul Subhash) ಮಾರತ್ತಹಳ್ಳಿ ಮಂಜುನಾಥ್ ಲೇಔಟ್‌ನ (Manjunath Layout) ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ನನ್ನ ಪತ್ನಿ ನಿಖಿತಾ ಹಾಗೂ ಆಕೆಯ ತಾಯಿ, ಸಹೋದರನ ಮೇಲೆ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದರು. ಟೆಕ್ಕಿ ಅತುಲ್ ಸಾವಿಗೆ ಕಾರಣವಾಗಿರೋ ಆರೋಪ ಎದುರಿಸುತ್ತಿರೋ ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಉತ್ತರ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದು, ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ಇನ್ನು ಪ್ರಕರಣ ಪ್ರಮುಖ ಆರೋಪಿಯಾಗಿರುವ ಮೃತ ಅತುಲ್ ಪತ್ನಿ ನಿಖಿತಾ ಬೆಂಗಳೂರು ಪೊಲೀಸರು ಉತ್ತರ ಪ್ರದೇಶಕ್ಕೆ ಬಂದಿರುವ ವಿಚಾರ ತಿಳಿದು ಊರು ಬಿಟ್ಟು ಹೋಗಿದ್ದಾಳೆ. ಆರೋಪಿ ನಿಖಿತಾ ಅವರಿಗೆ ಫೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದೇ ನಿಖಿತಾ ಮೊಬೈಲ್ ಸ್ವೀಚ್‌ಆಫ್ ಮಾಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್ ಜೈಲಿಂದ ರಿಲೀಸ್ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್
ಹಾಗಾಗಿ ಮಾರತ್ತಹಳ್ಳಿ ಪೊಲೀಸರು ಸ್ಥಳೀಯ ಪೊಲೀಸರ ಸಹಾಯ ಪಡೆದು ಉತ್ತರ ಪ್ರದೇಶದಲ್ಲಿರುವ ಆರೋಪಿ ನಿಖಿತಾ ಮನೆಗೆ ಹೋಗಿ ನೋಟಿಸ್ ಹಾಗೂ ಎಫ್‌ಐಆರ್ ಅಂಟಿಸಿ ಬಂದಿದ್ದಾರೆ. ನೋಟಿಸ್‌ನಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಒಂದು ವೇಳೆ ಆರೋಪಿತ ಮಹಿಳೆ ಪೊಲೀಸರ ಮುಂದೆ ಹಾಜರಾಗದೆ ಹೋದರೆ ಬಹುತೇಕ ನಿಖಿತಾಳನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲು ಮಾರತ್ತಹಳ್ಳಿ ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕೋವಿಡ್ ಅಕ್ರಮದ ತನಿಖೆಗೆ ಕೌಂಟ್ ಡೌನ್ – ಎಫ್‍ಐಆರ್ ದಾಖಲು